ಬೆಂಗಳೂರು: ಪರಿಶುದ್ಧ ಚಿನ್ನದ ದರ ಇನ್ನೇನು ಲಕ್ಷದ ಗಡಿ ಮುಟ್ಟಿದೆ ಎನ್ನುವ ಸ್ಥಿತಿಯಲ್ಲಿದ್ದರೆ ಇತರೆ ಚಿನ್ನದ ದರವೂ ಇಂದು ಕೊಂಚ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ದರದಲ್ಲಿ ಮತ್ತೆ ಏರಿಕೆಯಾಗಲು ಆರಂಭವಾಗಿತ್ತು. ಲಕ್ಷದ ಗಡಿ ತಲುಪಿದ್ದ ಚಿನ್ನದ ದರ ಈ ವಾರವೂ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ. ಪರಿಶುದ್ಧ ಚಿನ್ನದ ದರ ಇಂದು ಕೊಂಚವೇ ಕಮ್ಮಿಯಾಗಿದೆ. ಹಾಗಿದ್ದರೂ ಗ್ರಾಹಕರು ಸಮಾಧಾನಪಡುವಂತಿಲ್ಲ. ಇಂದು ಪರಿಶುದ್ಧ ಚಿನ್ನದ ದರ ಕೊಂಚ ಇಳಿಕೆಯಾಗಿದ್ದು. ಇಂದು ಪರಿಶುದ್ಧ ಚಿನ್ನದ ದರ 99,140 ರೂ.ಗೆ ಬಂದು ನಿಂತಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 49 ರೂ. ಏರಿಕೆಯಾಗಿದ್ದು 9,813 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 45 ರೂ. ಏರಿಕೆಯಾಗಿದ್ದು 8,995 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 37 ರೂ. ಏರಿಕೆಯಾಗಿದ್ದು 7,360 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ದರ ಕಳೆದ ವಾರ ಭಾರೀ ಏರಿಕೆಯಾಗಿ ಲಕ್ಷ ತಲುಪಿತ್ತು.. ಇಂದು ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ. ನಿನ್ನೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಏರಿಕೆಯಾಗಿ 1,00, 000 ರೂ.ಗೆ ಬಂದು ತಲುಪಿತ್ತು. ಇಂದೂ ಕೂಡಾ ಅದೇ ದರವಿದೆ.