Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Gold

Krishnaveni K

ಬೆಂಗಳೂರು , ಶುಕ್ರವಾರ, 30 ಮೇ 2025 (11:34 IST)
ಬೆಂಗಳೂರು: ಚಿನ್ನ ಖರೀದಿದಾರರಿಗೆ ಇಂದು ಸ್ವಲ್ಪ ಸಿಹಿ, ಸ್ವಲ್ಪ ಕಹಿ ಸುದ್ದಿ. ಯಾಕೆಂದರೆ ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾದರೆ ಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ನಿನ್ನೆ ಇಂದು ಪರಿಶುದ್ಧ ಚಿನ್ನದ ದರ ಇಂದು ಕೊಂಚವೇ ಹೆಚ್ಚಾಗಿತ್ತು. ಹೀಗಾಗಿ ಮತ್ತೆ ಚಿನ್ನದ ದರ ಏರು ಗತಿಯಲ್ಲಿ ಸಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂದು ಮತ್ತೆ ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ 98,740 ರೂ.ಗೆ ಬಂದು ನಿಂತಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಇಂದು 27 ರೂ. ಏರಿಕೆಯಾಗಿದ್ದು 9,731 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಇಂದು 25 ರೂ. ಏರಿಕೆಯಾಗಿದ್ದು  8,920 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು 21 ರೂ.ಏರಿಕೆಯಾಗಿ 7,299 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಎರಡು ದಿನಗಳಿಂದ ಬೆಳ್ಳಿ ದರವೂ ಏರಿಕೆ ಅಥವಾ ಇಳಿಕೆಯಾಗಿರಲಿಲ್ಲ. ಬೆಳ್ಳಿ ದರ ಯಥಾಸ್ಥಿತಿಯಲ್ಲಿತ್ತು.  ನಿನ್ನೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಇಳಿಕೆಯಾಗಿತ್ತು. ಇಂದೂ ಬೆಳ್ಳಿ ದರ ಯಥಾಸ್ಥಿತಿಯಲ್ಲಿದ್ದು 99, 900 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Kerala Rains: ಕಾಸರಗೋಡಿನಲ್ಲಿ ವಿಪರೀತ ಮಳೆ, ಮಧೂರು ದೇವಾಲಯದೊಳಗೇ ನುಗ್ಗಿದ ನೀರು