ಬೆಂಗಳೂರು: ಚಿನ್ನದ ದರ ಖರೀದಿದಾರರಿಗೆ ಇಂದೂ ಶಾಕಿಂಗ್ ಸುದ್ದಿ. ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ಸದ್ಯಕ್ಕತೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಈಗಿನ ಟ್ರೆಂಡ್ ಗಮನಿಸಿದರೆ ಪಕ್ಕಾ ಆಗುತ್ತದೆ. ಕಳೆದ ಎರಡು ದಿನಗಳಿಂದ ಚಿನ್ನದ ದರ ಕೊಂಚ ಮಟ್ಟಿಗೆ ಏರಿಕೆಯಾಗುತ್ತಲೇ ಇದೆ. ಇಂದೂ ಚಿನ್ನದ ದರ ಭಾರೀ ಏರಿಕೆಯಾಗಿದ್ದು ಲಕ್ಷದ ಗಡಿ ತಲುಪಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 99 ಸಾವಿರ ಗಡಿಗೆ ಬಂದಿತ್ತು. ಇಂದು 99, 845 ರೂ.ಗೆ ಬಂದು ನಿಂತಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 11 ರೂ. ಏರಿಕೆಯಾಗಿದ್ದು 9,917 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 10 ರೂ. ಏರಿಕೆಯಾಗಿದ್ದು 9,090 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 8 ರೂ. ಏರಿಕೆಯಾಗಿದ್ದು 7,438 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಇಂದೂ ಭಾರೀ ಏರಿಕೆಯಾಗಿದೆ. ಇಂದು ಮತ್ತೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 1900 ರೂ. ಏರಿಕೆಯಾಗಿದೆ. ಇಂದೂ ಬೆಳ್ಳಿ ದರ 1,02, 000 ರೂ.ಗಳಷ್ಟಿದೆ.