Select Your Language

Notifications

webdunia
webdunia
webdunia
webdunia

Gold Price today: ಚಿನ್ನದ ದರ ಕೇಳಿದ್ರೆ ಇಂದು ಶಾಕ್ ಆಗ್ತೀರಿ

gold
ಬೆಂಗಳೂರು: ಚಿನ್ನದ ದರ ಖರೀದಿ ಮಾಡಬೇಕೆಂದಿದ್ದರೆ ಇಂದಿನ ದರ ಕೇಳಿಯೇ ಶಾಕ್ ಆಗಬಹುದು. ಇಂದು ಪರಿಶುದ್ಧ ಚಿನ್ನದ ದರ ಗಗನಕ್ಕೇರಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇದೆ. ನಿನ್ನೆ ಪರಿಶುದ್ಧ ಚಿನ್ನದ ಕೊಂಚ ಇಳಿಕೆಯಾಗಿತ್ತು. ಆದರೆ ಇಂದು ಚಿನ್ನದ ದರ ಭಾರೀ ಏರಿಕೆಯಾಗಿದ್ದು ಲಕ್ಷದ ಗಡಿ ತಲುಪಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 98,295 ರೂ.ಗಳಿತ್ತು. ಇಂದು 99, 690 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ  ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 22 ರೂ. ಏರಿಕೆಯಾಗಿದ್ದು 9,906 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 20 ರೂ. ಏರಿಕೆಯಾಗಿದ್ದು 9,080 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 17 ರೂ. ಏರಿಕೆಯಾಗಿದ್ದು 7,430 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಇಂದೂ ಕೊಂಚವೇ ಏರಿಕೆಯಾಗಿದೆ. ಇಂದು ಮತ್ತೆ ಬೆಳ್ಳಿ ದರಲ್ಲಿ ಪ್ರತೀ ಕೆ.ಜಿ.ಗೆ 100 ರೂ. ಏರಿಕೆಯಾಗಿದೆ. ಇಂದೂ ಬೆಳ್ಳಿ ದರ 1,00, 100 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Kanimozhi: ಭಾರತದ ರಾಷ್ಟ್ರಭಾಷೆ ಯಾವುದು, ಸಂಸದೆ ಕನಿಮೊಳಿ ಕೊಟ್ಟ ಉತ್ತರದ ವಿಡಿಯೋ ಈಗ ವೈರಲ್