ನವದೆಹಲಿ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬಣ್ಣ ಬಯಲು ಮಾಡುತ್ತಿರುವ ವಿಶ್ವ ಪರ್ಯಟನೆ ಮಾಡುತ್ತಿರುವ ಭಾರತದ ಸರ್ವಪಕ್ಷ ನಿಯೋಗದ ಸದಸ್ಯೆಯಾಗಿರುವ ಸಂಸದೆ ಕನಿಮೊಳಿ ಭಾರತದ ರಾಷ್ಟ್ರಭಾಷೆ ಯಾವುದು ಎಂಬ ಪ್ರಶ್ನೆಗೆ ಕೊಟ್ಟ ಉತ್ತರ ಈಗ ಭಾರ ವೈರಲ್ ಆಗಿದೆ.
ಮ್ಯಾಡ್ರಿಡ್ ನಲ್ಲಿ ಭಾರತೀಯರನ್ನುದ್ದೇಶಿಸಿ ಕನಿಮೊಳಿ ಮಾತನಾಡಿದ್ದಾರೆ. ಈ ವೇಳೆ ಡಿಎಂಕೆ ಸದಸ್ಯೆಗೆ ಭಾರತದ ರಾಷ್ಟ್ರಭಾಷೆ ಯಾವುದು ಎಂದು ಕೇಳಲಾಗಿದೆ. ಇದಕ್ಕೆ ಅವರು ಕೊಟ್ಟ ಉತ್ತರಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಭಾರತದ ರಾಷ್ಟ್ರಭಾಷೆ ವಿವಿಧತೆ ಮತ್ತು ಏಕತೆ. ಈ ನಿಯೋಗವೂ ಇದೇ ಸಂದೇಶವನ್ನು ಜಗತ್ತಿಗೆ ಹೇಳಲು ಬಯಸುತ್ತಿದೆ. ಈವತ್ತಿನ ಅಗತ್ಯವೂ ಇದೇ ಆಗಿದೆ ಎಂದಿದ್ದಾರೆ. ಅವರ ಈ ಉತ್ತರಕ್ಕೆ ಅಲ್ಲಿದ್ದವರಿಂದಲೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಮೋದಿ ಸರ್ಕಾರ ಕಳುಹಿಸಿರುವ ಸರ್ವಪಕ್ಷ ನಿಯೋಗದ ವಿಶೇಷತೆಯೇ ಇದು. ನಮ್ಮ ದೇಶದಲ್ಲಿ ಪಕ್ಷಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿರಲಿ. ಆದರೆ ವಿದೇಶದಲ್ಲಿ ದೇಶದ ವಿಚಾರವಾಗಿ ಒಗ್ಗಟ್ಟು ಪ್ರದರ್ಶಿಸುತ್ತಿದೆ. ಇದು ಮೆಚ್ಚುಗೆಗೂ ಪಾತ್ರವಾಗುತ್ತಿದೆ.