Publish Date: Mon, 02 Jun 2025 (10:05 IST)
Updated Date: Mon, 02 Jun 2025 (10:12 IST)
ಬೆಂಗಳೂರು: ಆಟೋವಾಲನಿಗೆ ಚಪ್ಪಲಿಯಿಂದ ಹೊಡೆದು ಈಗ ಹಿಂದಿವಾಲ ದಂಪತಿ ಕೈಕಾಲು ಹಿಡಿದು ಕ್ಷಮೆ ಕೇಳಿದ ಘಟನೆ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಅನ್ಯ ರಾಜ್ಯದ ನಿವಾಸಿಗಳಿಂದ ಆಟೋ, ಕ್ಯಾಬ್ ಚಾಲಕರಿಗೆ ಕಿರುಕುಳ ನೀಡುವ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಈ ಘಟನೆಯೂ ಸೇರ್ಪಡೆ. ಆಟೋ ಚಾಲಕರೊಬ್ಬರಿಗೆ ಹಿಂದಿ ಮಾತನಾಡುವ ಮಹಿಳೆಯೊಬ್ಬಳು ಚಪ್ಪಲಿಯಿಂದ ಹೊಡೆದಿದ್ದ ವಿಡಿಯೋ ವೈರಲ್ ಆಗಿತ್ತು.
ಗರ್ಭಿಣಿಯಾಗಿರುವ ಮಹಿಳೆ ಆಸ್ಪತ್ರೆಗೆ ಹೋಗಿ ದ್ವಿಚಕ್ರವಾಹನದಲ್ಲಿ ಬರುವಾಗ ಬೆಳಂದೂರು ಬಳಿ ಆಟೋ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದಿದೆ ಎಂದು ರದ್ದಾಂತ ಮಾಡಿದ್ದಳು. ಅಲ್ಲದೆ, ಆಟೋ ಚಾಲಕನಿಗೆ ತನ್ನ ಕಾಲಲ್ಲಿದ್ದ ಚಪ್ಪಲಿ ತೆಗೆದು ಹೊಡೆದಿದ್ದಳು. ಈ ವಿಡಿಯೋ ವೈರಲ್ ಆಗಿತ್ತು.
ಘಟನೆ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಳು. ಪೊಲೀಸರು ಮಹಿಳೆಯ ಹೇಳಿಕೆ ದಾಖಲಿಸಿ ಕಳುಹಿಸಿದ್ದರು. ಇದೀಗ ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಹಿಳೆ ಮತ್ತು ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಅಲ್ಲದೆ, ನಮಗೆ ಬೆಂಗಳೂರು ಎಂದರೆ ಇಷ್ಟ, ಕನ್ನಡಿಗರು ನಮ್ಮನ್ನು ಕ್ಷಮಿಸಿ. ಆಟೋ ಚಾಲಕರ ಬಗ್ಗೆ ನಮಗೆ ಗೌರವವಿದೆ ಎಂದು ಹೇಳಿಕೆಯನ್ನೂ ನೀಡಿದ್ದಾರೆ.