ಬೆಂಗಳೂರು: ಕೆಲವು ಯುವ ಪ್ರೇಮಿಗಳು ಹೇಗೆ ಎಂದರೆ ಇಡೀ ಜಗತ್ತಿನಲ್ಲಿ ತಾವಿಬ್ಬರೇ ಇರುವುದು ಎಂದು ಅಂದುಕೊಂಡುಬಿಟ್ಟಿರುತ್ತಾರೆ. ಈ ಯುವ ಪ್ರೇಮಿಗಳೂ ಅದೇ ರೀತಿ ನಾಚಿಕೆಯಿಲ್ಲದೇ ಸಾರ್ವಜನಿಕವಾಗಿ ಬಸ್ ನಲ್ಲೇ ರೊಮ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 
									
			
			 
 			
 
 			
					
			        							
								
																	ಯುವರ್ಸ್ ಜಾನ್ಸ್ ಎಂಬ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಇಂತಹದ್ದೊಂದು ವಿಡಿಯೋ ಹರಿಯಬಿಡಲಾಗಿದೆ. ಈಗ ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಕಂಡು ವೈರಲ್ ಆಗಿದೆ. ವಿಡಿಯೋ ನೋಡಿದ ಜನ ಯುವ ಜೋಡಿಗೆ ಛೀಮಾರಿ ಹಾಕಿದ್ದಾರೆ.
									
										
								
																	ಬಸ್ ನ ಹಿಂಬದಿ ಸೀಟ್ ನಲ್ಲಿ ಕುಳಿತಿರುವ ಯುವ ಜೋಡಿ ಪ್ರಪಂಚವೇ ಮರೆತು ಪರಸ್ಪರ ತಬ್ಬಿಕೊಂಡು ಕಿಸ್ಸಿಂಗ್ ಮಾಡುತ್ತಿದ್ದಾರೆ. ಇದನ್ನು ಪಕ್ಕದಲ್ಲೇ ಸಾಗುತ್ತಿದ್ದ ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.
									
											
							                     
							
							
			        							
								
																	ಈ ಜೋಡಿಗೆ ಎಲ್ಲಿ ಹೇಗೆ ವರ್ತಿಸಬೇಕು ಎಂದು ಗೊತ್ತಿಲ್ಲವೇ? ಇಂತಹವರಿಗೆಲ್ಲಾ ತಕ್ಕ ಶಾಸ್ತಿಯಾಗಬೇಕು ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಇದನ್ನು ರೆಕಾರ್ಡ್ ಮಾಡಿರುವುದೇ  ತಪ್ಪು. ಇದು ಅವರ ಖಾಸಗಿ ಬದುಕು ಎಂದು ಸಮರ್ಥಿಸಿಕೊಂಡಿದ್ದಾರೆ.