Publish Date: Sat, 07 Jun 2025 (10:47 IST)
Updated Date: Sat, 07 Jun 2025 (10:49 IST)
ಬೆಂಗಳೂರು: ಚಿನ್ನದ ದರ ಖರೀದಿದಾರರಿಗೆ ಇಂದೂ ಶಾಕಿಂಗ್ ಸುದ್ದಿ. ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಚಿನ್ನದ ದರ ಸದ್ಯಕ್ಕತೆ ಇಳಿಕೆಯಾಗುವ ಲಕ್ಷಣವಿಲ್ಲ ಎಂದು ಈಗಿನ ಟ್ರೆಂಡ್ ಗಮನಿಸಿದರೆ ಪಕ್ಕಾ ಆಗುತ್ತದೆ. ಕಳೆದ ಎರಡು ದಿನಗಳಿಂದ ಚಿನ್ನದ ದರ ಕೊಂಚ ಮಟ್ಟಿಗೆ ಏರಿಕೆಯಾಗುತ್ತಲೇ ಇದೆ. ಎರಡು ದಿನಗಳಿಂದ ಚಿನ್ನದ ದರ ಲಕ್ಷದಲ್ಲಿದೆ. ನಿನ್ನೆ ಪರಿಶುದ್ಧ ಚಿನ್ನದ ದರ ಒಂದು ಲಕ್ಷ ಮೀರಿತ್ತು. ಇಂದೂ 1,00, 205.00 ರೂ.ಗೆ ಬಂದು ನಿಂತಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 163 ರೂ. ಇಳಿಕೆಯಾಗಿದ್ದು 9,797 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 150 ರೂ. ಇಳಿಕೆಯಾಗಿದ್ದು 8,980 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 122 ರೂ. ಇಳಿಕೆಯಾಗಿದ್ದು 7,348 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇದೆ. ಬೆಳ್ಳಿ ದರವೂ ಈಗ ಲಕ್ಷದಲ್ಲೇ ಇದೆ. ಚಿನ್ನದಂತೇ ಬೆಳ್ಳಿಯೂ ಏರಿಕೆಯಾಗುತ್ತಿರುವುದು ಗ್ರಾಹಕರಿಗೆ ಆತಂಕ ಮೂಡಿಸಿದೆ. ಇಂದು ಬೆಳ್ಳಿ ದರ 1,07, 000 ರೂ.ಗಳಷ್ಟಿದೆ.