Publish Date: Sat, 07 Jun 2025 (09:34 IST)
Updated Date: Sat, 07 Jun 2025 (09:36 IST)
ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಇಂದು ಸಂಚಾರ ಮಾರ್ಗವನ್ನೇ ಬದಲಾಯಿಸಲಾಗಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕಟಣೆ ನೀಡಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡುವ ಕಾರಣದಿಂದ ಪುಲಕೇಶಿನಗರ, ಕೆಜಿ ಹಳ್ಳಿ, ಮಿಲ್ಲರ್ಸ್ ರಸ್ತೆ, ಹೇನ್ಸ್ ರಸ್ತೆ, ನಂದಿದುರ್ಗ ರಸ್ತೆಗಳಲ್ಲಿ ಸಂಚಾರ ಬದಲಾವಣೆಯಾಗಲಿದೆ. ಇನ್ನು ಕೆಲವೆಡೆ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಬದಲಿ ಮಾರ್ಗಗಳನ್ನು ನೀಡಲಾಗಿದೆ.
ಈ ರಸ್ತೆಯಲ್ಲಿ ಹೋಗಬೇಡಿ
-ಮಿಲ್ಲರ್ ರಸ್ತೆ ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ನಿಂದ ಹೇನ್ಸ್ ಜಂಕ್ಷನ್ ವರೆಗೆ ಎರಡೂ ಬದಿ ಸಂಚಾರ ನಿರ್ಬಂಧಿಸಲಾಗಿದೆ.
-ಹೇನ್ಸ್ ಜಂಕ್ಷನ್ ನಿಂದ ಮಿಲ್ಲರ್ ರಸ್ತೆ ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ವರೆಗೆ ಎರಡೂ ಕಡೆಗೆ ಸಂಚಾರ ನಿರ್ಬಂಧಿಸಲಾಗಿದೆ.
-ನಂದಿ ದುರ್ಗ ರಸ್ತೆ- ಬೆನ್ಸನ್ ಕ್ರಾಸ್ ರಸ್ತೆ ಜಂಕ್ಷನ್ ನಿಂದ ಮಿಲ್ಲರ್ಸ್ ರಸ್ತತೆ ಜಂಕ್ಷನ್ ವರೆಗೆ ಎರಡು ಬದಿ ಸಂಚಾರ ನಿರ್ಬಂಧಿಸಲಾಗಿದೆ.
ಯಾವ ರಸ್ತೆಯಲ್ಲಿ ಹೋಗಬೇಕು?
-ಮಿಲ್ಲರ್ ರಸ್ತೆ ಕಂಟೋನ್ಮೆಂಟ್ ಅಂಡರ್ ಬ್ರಿಡ್ಜ್ ರಸ್ತೆಯಿಂದ ಪುಲಿಕೇಶಿ ನಗರಕ್ಕೆ ಹೋಗುವ ವಾಹನಗಳು ಮಿಲ್ಲರ್ಸ್ ರಸ್ತೆಯಲ್ಲಿ ಬಲ ತಿರುವು ಪಡೆದು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಮುಂಭಾಗ ಕಂಟೋನ್ಮೆಂಟ್ ರಸ್ತೆಯಲ್ಲಿ ಸಾಗಿ ಜಂಬೂಬಜಾರ್ ಜಂಕ್ಷನ್ ತಲುಪಿ ನಂತರ ನೇತಾಜಿ ರಸ್ತೆ ಮುಖಾಂತರ ಪುಲಿಕೇಶಿನಗರ ಕಡೆಗೆ ಹೋಗಬಹುದು.
-ಹೇನ್ಸ್ ಜಂಕ್ಷನ್ ನಿಂದ ಜಯಮಹಲ್ ರಸ್ತೆ ಕಡೆಗೆ ಸಂಚರಿಸುವವರು ಹೇನ್ಸ್ ರಸ್ತೆಯಲ್ಲಿ ನೇರವಾಗಿ ಹೋಗಿ ಧನಕೋಟಿ ರಸ್ತೆಯಲ್ಲಿ ಬಲತಿರುವು ಪಡೆದು ಎಂಎಂ ರಸ್ತೆ ಮುಖಾಂತರ ಬಂಬೂಬಜಾರ ತಲುಪಿ ಕಂಟೋನ್ಮೆಂಟ್ ಸಾಗಿ ಕ್ವೀನ್ಸ್ ರಸ್ತೆ-ತಿಮ್ಮಯ್ಯ ರಸ್ತೆ ಮುಖಾಂತರ ಜಯಮಹಲ್ ಕಡೆಗೆ ಹೋಗಬಹುದು.
-ನಂದಿ ದುರ್ಗ ರಸ್ತೆಯಿಂದ ಪುಲಿಕೇಶಿ ನಗರಕ್ಕೆ ಸಂಚರಿಸಬೇಕಾದರೆ ನಂದಿದುರ್ಗ ರಸ್ತೆ ಬೆನ್ಸನ್ ಕ್ರಾಸ್ ನಲ್ಲಿ ಎಡತಿರುವು ಪಡೆದು ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ಸಾಗಿ ಬೋರ್ ಬಂಕ್ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಪಾಟರಿ ಜಂಕ್ಷನ್ ತಲುಪಿ ಬಲತಿರುವು ಪಡೆದು ಪುಲಿಕೇಶಿ ನಗರಕ್ಕೆ ಸಂಚರಿಸಬಹುದು.
ಈ ಸ್ಥಳದಲ್ಲಿ ಪಾರ್ಕಿಂಗ್ ಇರಲ್ಲ
ಕಂಟೋನ್ಮೆಂಟ್ ರಸ್ತೆ, ಸೈಂಟ್ ಜಾನ್ಸನ್ ರಸ್ತೆ, ಮಿಲ್ಲರ್ಸ್ ರಸ್ತೆ, ನಂದಿದುರ್ಗ ರಸ್ತೆ, ಹೇನ್ಸ್ ರಸ್ತೆ, ನೇತಾಜಿ ರಸ್ತೆ, ಹೆಚ್ ಎಂ ರಸ್ತೆ, ಎಂಎಂ ರಸ್ತೆಯಲ್ಲಿ ಇಂದು ಪಾರ್ಕಿಂಗ್ ಗೆ ನಿಷೇಧ ಹೇರಲಾಗಿದೆ.