ಬೆಂಗಳೂರು: ಇಂದು ರಂಜಾನ್ ಹಬ್ಬದ ನಿಮಿತ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ. ಕೆಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ.
ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಲು ಅನುವು ಮಾಡಿಕೊಡಲು ಚಾಮರಾಜ ಪೇಟೆ, ಮೈಸೂರು ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.
ಮೈಸೂರು ರಸ್ತೆಯ ಪೋಲ್ ಗೇಟ್ ಜಂಕ್ಷನ್ ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ಫ್ಲೈ ಓವರ್ ಮೂಲಕ ಟೌನ್ ಹಾಲ್ ಸಂಚಾರ ನಿರ್ಬಂಧಿಸಲಾಗಿದೆ. ಟೌನ್ ಹಾಲ್ ಕಡೆಗೆ ಹೋಗುವವರು ಬ್ಯಾಟರಾಯನಪುರ ಸಂಚಾರ ರಾಣಾ ಸರಹದ್ದಿನ ಕಿತ್ತೋ ಜಂಕ್ಷನ್ ನಲ್ಲಿ ಎಡತಿರುವು ಪಡೆದುಕೊಂಡು ವಿಜಯನಗರ ಮೂಲಕ ಸಾಗಬಹುದು.
ಟೌನ್ ಹಾಲ್ ನಿಂದ ಮೈಸೂರು ರಸ್ತೆ ಕಡೆ ಹೋಗಲು ಬಿಜಿಎಸ್ ಫ್ಲೈ ಓವರ್ ಕೆಳಗೆಡೆ ಸರ್ವಿಸ್ ರಸ್ತೆ ಬಳಸಿಕೊಂಡು ಭಾರೀ ವಾಹನಗಳು ವೆಟರ್ನರಿ ಜಂಕ್ಷನ್ ನಲ್ಲಿ ಬಲ ತಿರುವು ಪಡೆದು ಗೂಡ್ ಶೆಡ್ ರಸ್ತೆ ಮೂಲಕ ಮತ್ತು ಲಘುವಾಹನಗಳು ಸಿರ್ಸಿ ಜಂಕ್ಷನ್ ನಲ್ಲಿ ಬಲ ತಿರುವು ಪಡೆದುಕೊಂಡು ಜೆಜೆ ನಗರ- ಟ್ಯಾಂಕ್ ಬಂಡ್ ರಸ್ತೆ-ಬಿನ್ನಿಮಲ್ ಜಂಕ್ಷನ್-ಹುಣಸೇಮರ ಮೂಲಕ ಸಾಗಬಹುದು.
ಬಸವನಗುಡಿ ಮತ್ತು ಚಾಮರಾಜಪೇಟೆ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಚಾಮರಾಜಪೇಟೆ 1 ನೇ ಮುಖ್ಯರಸ್ತೆ, 5 ನೇ ಅಡ್ಡರಸ್ತೆ ಮೂಲಕ ಮೈಸೂರು ಸಿರ್ಸಿ ಸರ್ಕಲ್, ಬಿನ್ನಿಮಲ್ ರಸ್ತೆ ಮೂಲಕ ಸಾಗಬಹುದು ಎಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.