ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಸೇವಿಂಗ್ಸ್ ಖಾತೆಯಲ್ಲಿಟ್ಟ ಹಣ ಆನ್ ಲೈನ್ ವಂಚಕರ ಪಾಲಾಗುತ್ತಿರುವ ಸುದ್ದಿಗಳು ಕೇಳಿಬರುತ್ತಿದೆ. ಸೇವಿಂಗ್ಸ್ ಖಾತೆಯಲ್ಲಿ ಹಣ ಕಳೆದುಕೊಳ್ಳುವ ಭಯವಿದ್ದರೆ ಏನು ಮಾಡಬೇಕು ನೋಡಿ.
ಸೇವಿಂಗ್ಸ್ ಖಾತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿಟ್ಟುಕೊಳ್ಳುವುದು ಸೇಫ್ ಅಲ್ಲ ಎಂದು ಬ್ಯಾಂಕ್ ಅಧಿಕಾರಿಗಳೇ ಸಲಹೆ ನೀಡುತ್ತಾರೆ. ಆನ್ ಲೈನ್ ಬಳಕೆಗೆ ಇದೇ ಖಾತೆಯನ್ನು ಬಳಸುವುದರಿಂದ ಸುಲಭವಾಗಿ ಇದು ವಂಚಕರಿಗೆ ದಾಳವಾಗುತ್ತಿದೆ.
ಹೀಗಾಗಿ ಸೇವಿಂಗ್ಸ್ ಖಾತೆಯಲ್ಲಿರುವ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡುವುದು ಉತ್ತಮ. ಎಫ್ ಡಿ ಖಾತೆಯಲ್ಲಿ ಹಣವಿಟ್ಟುಕೊಂಡರೆ ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರಲ್ಲಿ ಬಡ್ಡಿದರವೂ ಹೆಚ್ಚಿರುತ್ತದೆ. ಹೀಗಾಗಿ ಲಾಭದಾಯಕ ಕೂಡಾ.
ಇತ್ತೀಚೆಗಿನ ದಿನಗಳಲ್ಲಿ ಎಫ್ ಡಿ ಖಾತೆ ಮಾಡಲು ಬ್ಯಾಂಕ್ ಶಾಖೆಗಳಿಗೇ ತೆರಳಬೇಕೆಂದೇನಿಲ್ಲ. ಹೆಚ್ಚಿನ ಬ್ಯಾಂಕಿಂಗ್ ಆಪ್ ಗಳಲ್ಲೇ ಎಫ್ ಡಿ ಖಾತೆ ತೆರೆಯಲು, ಹಣ ಡೆಪಾಸಿಟ್ ಮತ್ತು ವಿತ್ ಡ್ರಾ ಮಾಡಲು ಅವಕಾಶವಿರುತ್ತದೆ. ಹೀಗಾಗಿ ಈ ಹಣವನ್ನು ಆಪ್ ಮೂಲಕವೇ ನೀವು ಎಫ್ ಡಿ ಮಾಡಿಕೊಳ್ಳಬಹುದು.