ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಆನ್ ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಆನ್ ಲೈನ್ ದಾಳಿಕೋರರಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸುರಕ್ಷಿತವಾಗಿಡಲು ಇಲ್ಲಿದೆ 5 ಟಿಪ್ಸ್.
ಬ್ಯಾಂಕ್ ಖಾತೆಯಿಂದ ಅಚಾನಕ್ ಆಗಿ ನಿಮಗೇ ಅರಿವಿಲ್ಲದಂತೆ ಹಣ ಕದಿಯುವ ಮಾರ್ಗಗಳನ್ನು ಆನ್ ಲೈನ್ ವಂಚಕರು ಕಂಡುಕೊಂಡಿದ್ದಾರೆ. ಹೀಗಾಗಿ ಸೇವಿಂಗ್ಸ್ ಖಾತೆಯಲ್ಲಿ ಹಣ ಠೇವಣಿ ಇಡಲೂ ಹಿಂದೆ ಮುಂದೆ ನೋಡುವಂತಾಗಿದೆ. ಆದರೆ ನೀವು ಕೆಲವು ಎಚ್ಚರಿಕೆ ವಹಿಸಿದರೆ ಆನ್ ಲೈನ್ ವಂಚನೆ ತಡೆಯಬಹುದಾಗಿದೆ.
ಸ್ಟ್ರಾಂಗ್ ಪಾಸ್ ವರ್ಡ್ ಹಾಕಿ
ಆನ್ ಲೈನ್ ಮೂಲಕ ಟ್ರಾನ್ಸಾಕ್ಷನ್ ಮಾಡುತ್ತಿದ್ದರೆ ಅಥವಾ ಯುಪಿಐ ಮೂಲಕ ಟ್ರಾನ್ಸಾಕ್ಷನ್ ಮಾಡುತ್ತಿದ್ದರೆ ನಿಮ್ಮ ಖಾತೆಗೆ ಪ್ರಬಲ ಪಾಸ್ ವರ್ಡ್ ಒಂದನ್ನು ಸೆಟ್ ಮಾಡಿ. ಸುಲಭವಾಗಿ ಯಾರೂ ಊಹಿಸಲಾಗದ ಪಾಸ್ ವರ್ಡ್ ಹಾಕಿ.
ವೈಫೈ ಕನೆಕ್ಷನ್ ಬಗ್ಗೆ ಎಚ್ಚರ
ಮೊಬೈಲ್ ನಲ್ಲಿ ಯುಪಿಐ ಪಾವತಿ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮ ಮೊಬೈಲ್ ವೈಫೈ ಕನೆಕ್ಷನ್ ನ್ನು ಪ್ರೈವೇಟ್ ಎಂದು ಬದಲಾಯಿಸಿಕೊಳ್ಳಿ. ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಫೋನ್ ವೈಫೈ ಆನ್ ಮಾಡಬೇಡಿ.
ಖಾತೆ ಚೆಕ್ ಮಾಡುತ್ತಿರಿ
ಪದೇ ಪದೇ ನಿಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡುತ್ತಿರಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಕರೆಂಟ್ ಬ್ಯಾಲೆನ್ಸ್ ನಲ್ಲಿ ಹೆಚ್ಚು ಕಡಿಮೆಯಾಗಿದೆಯೇ ಎಂಬುದನ್ನು ದಿನಕ್ಕೊಮ್ಮೆಯಾದರೂ ಗಮನಿಸುತ್ತಿರಬೇಕು
ಪಾಸ್ ವರ್ಡ್ ಶೇರ್ ಮಾಡಿ
ಎಷ್ಟೇ ಹತ್ತಿರದವರಾಗಿದ್ದರೂ ನಿಮ್ಮ ಖಾತೆಯ ಪಾಸ್ ವರ್ಡ್ ರಹಸ್ಯವಾಗಿಯೇ ಇರಲಿ. ಯಾವುದೇ ಬ್ಯಾಂಕ್ ಗಳೂ ಗ್ರಾಹಕರ ಪಾಸ್ ವರ್ಡ್ ಕೇಳಲ್ಲ. ಹೀಗೆ ಯಾರಾದರೂ ನಿಮ್ಮಲ್ಲಿ ಕೇಳುತ್ತಿದ್ದಾರೆ ಎಂದರೆ ಅದು ವಂಚನೆ ಎಂದೇ ಅರ್ಥ. ಅದೇ ರೀತಿ ಸಾರ್ವನಿಕ ಸ್ಥಳಗಳಲ್ಲಿ ಪಾಸ್ ವರ್ಡ್ ಯಾರಿಗೂ ಹೇಳಬೇಡಿ. ನಿಮ್ಮ ಪಾಕೆಟ್ ಡೈರಿಯಲ್ಲೋ, ಇನ್ನೆಲ್ಲೋ ಪಾಸ್ ವರ್ಡ್ ಬರೆದಿಡುವ ಅಭ್ಯಾಸವೂ ಬೇಡ.
ಈಮೇಲ್, ಮೆಸೇಜ್ ಗಳ ಬಗ್ಗೆ ಎಚ್ಚರ
ಕಾರಣವಿಲ್ಲದೇ ನಿಮ್ಮ ಬ್ಯಾಂಕ್ ಖಾತೆ ವಿವರ ಕೇಳಿಕೊಂಡು ಬರುವ ಈಮೇಲ್, ಮೆಸೇಜ್ ಗಳನ್ನು ಓಪನ್ ಮಾಡುವುದು ಅಥವಾ ಪ್ರತಿಕ್ರಿಯಿಸಲು ಹೋಗಬೇಡಿ. ಇದು ಸ್ಕ್ಯಾಮ್ ಅಥವಾ ಹ್ಯಾಕರ್ ಗಳ ಕೈಚಳಕವಾಗಿರುತ್ತದೆ.
ನಿಮ್ಮ ಖಾತೆ ವಿಚಾರದಲ್ಲಿ ನಿಮ್ಮ ಗಮನಕ್ಕೆ ಬಾರದೇ ಏನೇ ಕಡಿತ, ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿದೆ ಎಂದರೆ ತಕ್ಷಣವೇ ನಿಮ್ಮ ಖಾತೆ ಇರುವ ಬ್ರ್ಯಾಂಚ್ ಗಮನಕ್ಕೆ ತನ್ನಿ.