ನವದೆಹಲಿ: ಹೊಸ ವರ್ಷದ ಮೊದಲ ದಿನಕ್ಕೆ ಎಲ್ ಪಿಜಿ ಬಳಕೆದರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮೊದಲ ದಿನವೇ ಎಲ್ ಪಿಜಿ ಬೆಲೆ ಇಳಿಕೆಯಾಗಿದೆ.
ಇಂಡಿಯನ್ ಆಯಿಲ್ ಸೇರಿದಂತೆ ಪ್ರಮುಖ ತೈಲ ಕಂಪನಿಗಳು ವರ್ಷದ ಮೊದಲ ದಿನವೇ ಬೆಲೆ ಇಳಿಕೆ ಮಾಡುವ ಮೂಲಕ ಜನರಿಗೆ ಖುಷಿ ಸುದ್ದಿ ನೀಡಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. 19 ಕೆ.ಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 14.5 ರೂ. ನಿಂದ 19 ರೂ.ನಷ್ಟು ಇಳಿಕೆಯಾಗಿದೆ.
ಆದರೆ ಸದ್ಯಕ್ಕೆ ಗೃಹ ಬಳಕೆಯ ಸಿಲಿಂಡರ್ ಬೆಲೆ ಯಥಾ ಸ್ಥಿತಿಯಲ್ಲಿದೆ. 19 ಕೆ.ಜಿ ಮತ್ತು 47 ಕೆ.ಜಿ ಸಿಲಿಂಡರ್ ಬೆಲೆ ಮಾತ್ರ ಸದ್ಯಕ್ಕೆ ಇಳಿಕೆಯಾಗಿದೆ. ಕಮರ್ಷಿಯಲ್ ಸಿಲಿಂಡರ್ ಬೆಲೆ ಇತ್ತೀಚೆಗಿನ ದಿನಗಳಲ್ಲಿ ಇಳಿಕೆಯಾಗಿರಲೇ ಇಲ್ಲ. ಕಮರ್ಷಿಯಲ್ ಸಿಲಿಂಡರ್ ಬೆಲೆ ಜೂನ್ ನಲ್ಲಿ ಮತ್ತು ಗೃಹ ಬಳಕೆ ಸಿಲಿಂಡರ್ ಬೆಲೆ ಮಾರ್ಚ್ ನಲ್ಲಿ ಇಳಿಕೆಯಾಗಿತ್ತು.
ಪ್ರತೀ ತಿಂಗಳಿಗೊಮ್ಮೆ ತೈಲ ಬೆಲೆಯಲ್ಲಿ ಪರಿಷ್ಕರಣೆಯಾಗುತ್ತದೆ. ಇದೀಗ ಜನವರಿ 1 ರಂದು ಕಮರ್ಷಿಯಲ್ ಸಿಲಿಂಡರ್ ಬಳಕೆದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದಲ್ಲದೆ ವಿಮಾನ ಇಂಧನ ಬೆಲೆಯಲ್ಲೂ ಇಳಿಕೆಯಾಗಿದೆ.