Select Your Language

Notifications

webdunia
webdunia
webdunia
webdunia

January Bank Holidays: ಜನವರಿಯಲ್ಲಿ ಈ ದಿನಗಳಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾ: ಇಲ್ಲಿದೆ ಲಿಸ್ಟ್

Bank

Krishnaveni K

ಬೆಂಗಳೂರು , ಸೋಮವಾರ, 30 ಡಿಸೆಂಬರ್ 2024 (10:30 IST)
ಬೆಂಗಳೂರು: ಜನವರಿ ತಿಂಗಳು ಹೊಸ ವರ್ಷದ ಜೊತೆಗೆ ಹಬ್ಬಗಳ ತಿಂಗಳು ಕೂಡಾ. 2025 ರ ಹೊಸ ವರ್ಷದ ಮೊದಲ ತಿಂಗಳೇ ಎಷ್ಟು ದಿನ ಬ್ಯಾಂಕ್ ಗಳಿಗೆ ರಜೆಯಿರುತ್ತದೆ ಇಲ್ಲಿದೆ ಲಿಸ್ಟ್.

ಹೊಸ ವರ್ಷದಲ್ಲಿ ಬ್ಯಾಂಕ್ ರಜೆಗಳ ಅಧಿಕೃತ ಪಟ್ಟಿಯನ್ನು ಇನ್ನೂ ಆರ್ ಬಿಐ ಪ್ರಕಟಿಸಿಲ್ಲ. ಆದರೂ ಜನವರಿ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಎಷ್ಟು ದಿನ ರಜೆಯಿರುತ್ತದೆ ಎಂಬ ಮಾಹಿತಿಯಿದೆ.  ರಜಾ ದಿನಗಳಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆ ಮಾಡಬಹುದು. ಆದರೆ ಈ ಕೆಲವು ದಿನಗಳಲ್ಲಿ ನೇರವಾಗಿ ಬ್ಯಾಂಕ್ ಗೆ ಹೋಗಿ ವ್ಯವಹಾರ ಮಾಡಲು ಸಾಧ್ಯವಿಲ್ಲ.

ಜನವರಿ 2025 ರ ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ.
ಜನವರಿ 1: ಕೆಲವೊಂದು ಬ್ಯಾಂಕ್ ಗಳು ಇಂದು ಹೊಸ ವರ್ಷದ ನಿಮಿತ್ತ ಕಾರ್ಯನಿರ್ವಹಿಸುವುದಿಲ್ಲ.
ಜನವರಿ 6: ಗುರು ಗೋವಿಂದ್ ಜಯಂತಿ ನಿಮಿತ್ತ ಉತ್ತರ ಭಾರತೀಯ ಮೂಲದ ಕೆಲವೊಂದು ಬ್ಯಾಂಕ್ ಗಳಿಗೆ ರಜೆಯಿರುತ್ತದೆ.
ಜನವರಿ 11: ಎರಡನೇ ಶನಿವಾರ ನಿಮಿತ್ತ ರಜೆ
ಜನವರಿ 14: ಸಂಕ್ರಾಂತಿ ರಜೆ
ಜನವರಿ 16: ಸಂಕ್ರಾಂತಿ ರಜೆ
ಜನವರಿ 26: ಪ್ರಜಾಪ್ರಭುತ್ವ ದಿನಾಚರಣೆ ನಿಮಿತ್ತ ಎಲ್ಲಾ ಬ್ಯಾಂಕ್ ಗಳಿಗೂ ರಜೆ.

ಉಳಿದಂತೆ ಇಡೀ ವರ್ಷದ ಬ್ಯಾಂಕ್ ರಜೆಗಳ ಪಟ್ಟಿಯನ್ನು ಆರ್ ಬಿಐ ಸದ್ಯದಲ್ಲೇ ಪ್ರಕಟಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2025 Predictions: 2025 ರಲ್ಲಿ ಯಾವುದರಲ್ಲಿ ಹೂಡಿಕೆ ಮಾಡಿದರೆ ಲಾಭವಾಗಲಿದೆ