ನವದೆಹಲಿ: ಹೊಸ ವರ್ಷ ಬಂತೆಂದರೆ ಆಡಳಿತ, ಸರ್ಕಾರದ ನಿಯಮಗಳಲ್ಲೂ ಕೆಲವು ಬದಲಾವಣೆಗಳಾಗುತ್ತವೆ. 2024 ಮುಗಿಯಲು ಇನ್ನೇನು ನಾಲ್ಕೇ ದಿನಗಳು ಬಾಕಿಯಿದ್ದು ಹೊಸ ವರ್ಷದಿಂದ ಏನೆಲ್ಲಾ ಬದಲಾವಣೆಯಾಗಲಿದೆ ಎಂಬ ವಿವರ ಇಲ್ಲಿದೆ ನೋಡಿ.
2025 ರಿಂದ ಇಪಿಎಫ್ಒ ಹೊಸ ನಿಯಮ
ಜನವರಿ 1 ರಿಂದ ಪಿಂಚಣಿದಾರರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮವನ್ನು ಜಾರಿಗೆ ತರಲಿದೆ. ಹೊಸ ನಿಯಮದ ಅನುಸಾರ ಪಿಂಚಣಿದಾರರು ದೇಶದ ಯಾವುದೇ ಮೂಲೆಯಿಂದ ಯಾವುದೇ ಬ್ಯಾಂಕ್ ನಿಂದ ಹಿಂಪಡೆಯಲು ಸಾಧ್ಯವಾಗಲಿದೆ. ಇದಕ್ಕಾಗಿ ಯಾವುದೇ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ.
ಎಲ್ ಪಿಜಿ ಸಿಲಿಂಡರ್ ದರ ಯುಪಿಐನಲ್ಲಿ ಪಾವತಿಸಿ
ಜನವರಿ 1 ರಿಂದ ಎಲ್ ಪಿಜಿ ಸಿಲಿಂಡರ್ ಡೆಲಿವರಿ ಬಳಿಕ ಯುಪಿಐ ಮೂಲಕ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ. ಈ ಮೂಲಕ ಇಲ್ಲೂ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.
ಎಲ್ ಪಿಜಿ ಸಿಲಿಂಡರ್ ದರ ಹೆಚ್ಚಳ
ತೈಲ ಮಾರುಕಟ್ಟೆಗಳು ಹೊಸ ವರ್ಷಕ್ಕೆ ತೈಲ ಬೆಲೆ ದರ ಪರಿಷ್ಕರಣೆ ಮಾಡಲಿದ್ದು, ಜನವರಿಯಿಂದಲೇ ವಾಣಿಜ್ಯ ಮತ್ತು ಗೃಹೋಪಯೋಗಿ ಸಿಲಿಂಡರ್ ದರ ಹೆಚ್ಚಳವಾಗುವ ಸಾಧ್ಯತೆಯಿದೆ.
ಯುಪಿಐ ಪೇ ನಿಯಮ ಬದಲಾವಣೆ
ಯುಪಿಐ 123 ಪೇ ಫೀಚರ್ ಫೋನ್ ಗಳ ಮೂಲಕ ಆನ್ ಲೈನ್ ಪಾವತಿ ಸೌಲಭ್ಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ. ಈ ವಹಿವಾಟಿನ ಮಿತಿಯನ್ನು 10, 000 ರೂ.ಗೆ ಏರಿಕೆ ಮಾಡಲಾಗುತ್ತದೆ. ಈ ಮೊದಲು ಮಿತಿ 5,000 ರೂ.ಗಳಷ್ಟಿತ್ತು.