Select Your Language

Notifications

webdunia
webdunia
webdunia
webdunia

UPI Lite: ಯುಪಿಐ ಲೈಟ್ ಬಳಸುತ್ತಿದ್ದೀರಾ, ಹಾಗಿದ್ದರೆ ಈ ಬದಲಾವಣೆ ಬಗ್ಗೆ ತಿಳಿದುಕೊಳ್ಳಿ

UPI Lite

Krishnaveni K

ನವದೆಹಲಿ , ಶನಿವಾರ, 7 ಡಿಸೆಂಬರ್ 2024 (09:10 IST)
Photo Credit: X
ನವದೆಹಲಿ: ಡಿಜಿಟಲ್ ಪಾವತಿ ಸುಲಭವಾಗಲು ಇಂದಿನ ದಿನಗಳಲ್ಲಿ ಅನೇಕರು ಯುಪಿಐ ಲೈಟ್ ಅನ್ನು ಬಳಸುತ್ತಿದ್ದಾರೆ. ಇದರಲ್ಲಿ ಸುಲಭವಾಗಿ ಹಣ ಕಳುಹಿಸಬಹುದು. ಆದರೆ ಇದಕ್ಕೆ ಈಗ ಆರ್ ಬಿಐ ಕೆಲವೊಂದು ಬದಲಾವಣೆಗಳನ್ನು ತಂದಿದೆ.

ಯುಪಿಐ ಲೈಟ್ ಫೀಚರ್ ಬಹಳ ಸುಲಭ ಮತ್ತು ಉಪಯುಕ್ತವಾಗಿದೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ನೀವು ಯಾವುದೇ ಕ್ಯೂ ಆರ್ ಕೋಡ್ ಬಳಸಿ ಸುಲಭವಾಗಿ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬಹುದು. ಯುಪಿಐ ಲೈಟ್ ನಲ್ಲಿ ನೀವು ಪಿನ್ ಹಾಕುವ ಅಗತ್ಯವೂ ಇರುವುದಿಲ್ಲ. ಆದರೆ ಈಗ ಯುಪಿಐ ಲೈಟ್ ನಲ್ಲಿ ಹಣ ಡೆಪಾಸಿಟ್ ಮತ್ತು ಪಾವತಿ ಮಿತಿಯನ್ನು ಕೊಂಚ ಹೆಚ್ಚಿಸಲಾಗಿದೆ.

ಈ ಮೊದಲು ಯುಪಿಐ ಲೈಟ್ ನಲ್ಲಿ ಟ್ರಾನ್ಸಾಕ್ಷನ್ ಮಾಡುವಾಗ 500 ರೂ. ಒಳಗಿನ ಮೊತ್ತವನ್ನು ಮಾತ್ರ ಪಾವತಿಸಬಹುದಿತ್ತು. ಆದರೆ ಈಗ 1,000 ರೂ. ವರೆಗೆ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಯುಪಿಐ ಲೈಟ್ ಖಾತೆಯಲ್ಲಿ ಇರಿಸಬಹುದಾದದ ಹಣದ ಮೊತ್ತವನ್ನು 2,000 ರೂ. ನಿಂದ 5,000 ರೂ.ಗೆ ಏರಿಕೆ ಮಾಡಲಾಗಿದೆ.

ಇತ್ತೀಚೆಗೆ ಯುಪಿಐ 123 ಪೇ ಫೀಚರ್ ನಲ್ಲಿ ಹಣ ಪಾವತಿಗೆ ಇದ್ದ ಮಿತಿಯನ್ನು 5,000 ರೂ. ನಿಂದ 10,000 ರೂ.ಗೆ ಏರಿಕೆ ಮಾಡಲಾಗಿತ್ತು. ಡಿಜಿಟಲ್ ಪಾವತಿ ಕಾರ್ಯ ಇನ್ನಷ್ಟು ಸರಳ ಮತ್ತು ಸುಗಮಗೊಳಿಸಲು ಹಾಗೂ ಸರ್ವರ್ ಗಳ ಮೇಲಿನ ಒತ್ತಡ ತಗ್ಗಿಸಲು ಆರ್ ಬಿಐ ಯುಪಿಐ ಲೈಟ್ ನ ಮಿತಿಯನ್ನು ಹೆಚ್ಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ಯೆ ನೋಡಿ ವಾಪಾಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತ: ಕಾರಿನಲ್ಲಿದ್ದ ಐವರು ಸಾವು