ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪ್ಯಾನ್ 2.0 ಕಾರ್ಡ್ ಹಿಂದಿನದ್ದಕ್ಕಿಂತಲೂ ಹೆಚ್ಚು ಸುಲಭ ನಿರ್ವಹಣೆ ಮತ್ತು ಸುರಕ್ಷತೆ ಹೊಂದಿದ್ದು ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ ವಿವರ.
ಪ್ಯಾನ್ 2.0 ಕಾರ್ಡ್ ಹೊಂದುವುದು ಕಡ್ಡಾಯವೇನೂ ಅಲ್ಲ. ಈಗಾಗಲೇ ಇರುವ ಪ್ಯಾನ್ ಕಾರ್ಡ್ ಗಳನ್ನು ಬದಲಾಯಿಸಬೇಕು ಎಂದೂ ನಿರ್ದೇಶನ ಬಂದಿಲ್ಲ. ಆದರೆ ಈಗ ಹೊಸದಾಗಿ ಪರಿಚಯಿಸಲಾಗಿರುವ ಪ್ಯಾನ್ ಕಾರ್ಡ್ ನಲ್ಲಿ ಕ್ಯೂ ಆರ್ ಕೋಡ್ ನೀಡಲಾಗುತ್ತದೆ. ಇದರಿಂದ ಸರ್ಕಾರ ಸುಲಭವಾಗಿ ಜನರ ಮಾಹಿತಿಗಳನ್ನು ಪಡೆಯಬಹುದಾಗಿದೆ.
ಹೊಸ ಪ್ಯಾನ್ ಕಾರ್ಡ್ ನ್ನು ಈಮೇಲ್ ಮೂಲಕವೂ ಪಡೆದುಕೊಳ್ಳಬಹುದು. ಅರ್ಜಿ ಹಾಕುವುದು ಹೇಗೆ ಇಲ್ಲಿದೆ ವಿಧಾನ:
ಎನ್ ಎಸ್ ಡಿಎಲ್ ಇ-ಪೋರ್ಟಲ್ ಮೂಲಕ ಸಲ್ಲಿಸುವುದು ಹೇಗೆ
ಮೊದಲು ಎನ್ ಎಸ್ ಡಿಎಲ್ ಇ-ಪೋರ್ಟಲ್ https://www.onlineservices.nsdl.com/paam/endUserRegisterContact.html ಗೆ ಭೇಟಿ ನೀಡಬೇಕು.
ಅಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವಿವರ, ಹುಟ್ಟಿದ ದಿನಾಂಕ ಮತ್ತು ಆಧಾರ್ ಕಾರ್ಡ್ ವಿವರಗಳನ್ನು ನೀಡಬೇಕು
ಈಗ ನಿಮ್ಮ ಮೊಬೈಲ್ ಗೆ ಒಟಿಪಿಯೊಂದು ಬರುತ್ತದೆ
30 ದಿನಗಳೊಳಗೆ 3 ಬಾರಿ ಪ್ಯಾನ್ ಗೆ ಮನವಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಅದಕ್ಕಿಂತ ಹೆಚ್ಚು ಬಾರಿಯಾದರೆ 8.26 ರೂ. ಫೀ ತೆರಬೇಕಾಗುತ್ತದೆ.
ಶುಲ್ಕ ಪಾವತಿ ನಂತರ ನಿಮ್ಮ ಈ ಮೇಲ್ ಗೆ 30 ನಿಮಿಷದ ಅವಧಿಯಲ್ಲಿ ಪ್ಯಾನ್ ಕಾರ್ಡ್ ಬರುತ್ತದೆ
ಒಂದು ವೇಳೆ ನಿಮಗೆ ಫಿಸಿಕಲ್ ಪ್ಯಾನ್ ಕಾರ್ಡ್ ಬೇಕೆಂದರೆ 50 ರೂ. ಶುಲ್ಕ ಪಾವತಿಸಿ ಡೆಲಿವರಿ ಮಾಡಬೇಕಾದ ಸರಿಯಾದ ವಿಳಾಸವನ್ನು ನೀಡಿ ಪ್ಯಾನ್ ಕಾರ್ಡ್ ಪಡೆಯಬಹುದು.