Select Your Language

Notifications

webdunia
webdunia
webdunia
webdunia

ಬ್ಯಾಂಕ್ ಕೆಲಸಗಳಿದ್ದರೆ ಇದೇ ವಾರ ಮುಗಿಸಿಕೊಳ್ಳಿ: ಕಾರಣ ಇಲ್ಲಿದೆ

Bank

Krishnaveni K

ಬೆಂಗಳೂರು , ಗುರುವಾರ, 24 ಅಕ್ಟೋಬರ್ 2024 (10:09 IST)
ಬೆಂಗಳೂರು: ತುರ್ತು ಬ್ಯಾಂಕಿಂಗ್ ಕೆಲಸಗಳಿದ್ದರೆ ಇದೇ ವಾರ ಮುಗಿಸಿಕೊಳ್ಳುವುದು ಒಳ್ಳೆಯದು. ಯಾಕೆಂದರೆ ಮುಂದಿನ ವಾರ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿರುತ್ತದೆ.

ಮುಂದಿನ ವಾರ ಅಕ್ಟೋಬರ್ 31 ರಿಂದ ನವಂಬರ್ 3 ರವರೆಗೂ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆಯಿದೆ. ದೀಪಾವಳಿ ಜೊತೆಗೆ ರಾಜ್ಯೋತ್ಸವ, ಮೊದಲ ಶನಿವಾರ, ಭಾನುವಾರ ಸೇರಿದಂತೆ ನಾಲ್ಕು ದಿನ ಒಟ್ಟಿಗೇ ರಜೆಯಿರುತ್ತದೆ. ಹೀಗಾಗಿ ಬ್ಯಾಂಕ್ ಕೆಲಸಗಳನ್ನು ಮಾಡುವುದಿದ್ದರೆ ಇದೇ ವಾರ ಮುಗಿಸುವುದು ಉತ್ತಮ.

ಮುಂದಿನ ವಾರದ ಮೊದಲ ಎರಡು ದಿನ ಬ್ಯಾಂಕ್ ಕಾರ್ಯನಿರ್ವಹಿಸುವುದಿದ್ದರೂ ಸಾಕಷ್ಟು ರಜೆಯಿರುವುದರಿಂದ ಹೆಚ್ಚು ಜನಜಂಗುಳಿಯಿರುವ ಸಾಧ್ಯತೆಯಿದೆ. ಹೀಗಾಗಿ ಬ್ಯಾಂಕ್ ಕೆಲಸಗಳನ್ನು ಪೂರ್ತಿ ಮಾಡುವುದು ಕಷ್ಟವಾಗಬಹುದು. ಅದೇ ಕಾರಣಕ್ಕೆ ಈ ವಾರವೇ ಸೂಕ್ತವಾಗಿದೆ.

ದೀಪಾವಳಿ ಹಬ್ಬ ಅತ್ಯಂತ ಪ್ರಮುಖ ಹಬ್ಬವಾಗಿದ್ದು ರಾಷ್ಟ್ರೀಕೃತ, ಖಾಸಗಿ ಸೇರಿದಂತೆ ಎಲ್ಲಾ ವಲಯದ ಬ್ಯಾಂಕ್ ಗಳಿಗೂ ರಜೆಯಿರುತ್ತದೆ. ಕರ್ನಾಟಕದಲ್ಲಿ ಅಕ್ಟೋಬರ್ 31 ಕ್ಕೆ ದೀಪಾವಳಿ, ನವಂಬರ್ 1 ಕ್ಕೆ ರಾಜ್ಯೋತ್ಸವ, ನವಂಬರ್ 2 ಮೊದಲ ಶನಿವಾರ ಮತ್ತು ನವಂಬರ್ 3 ಕ್ಕೆ ಭಾನುವಾರವಾಗಿರುವುದರಿಂದ ಸಾಲು ಸಾಲು ರಜೆಯಿದೆ.  ಹೀಗಾಗಿ ಈ ರಜೆ ನೋಡಿಕೊಂಡು ನಿಮ್ಮ ಬ್ಯಾಂಕ್ ಕೆಲಸಗಳನ್ನು ನಿರ್ಧರಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಚನ್ನಪಟ್ಟಣದಲ್ಲಿ ಇಂದು ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಡಿಕೆಶಿ ಸಾಥ್