Select Your Language

Notifications

webdunia
webdunia
webdunia
webdunia

PPF New Rules: ಪಿಪಿಎಫ್, ಸುಕನ್ಯ ಸಮೃದ್ಧಿ ಎನ್ಎಸ್ಎಸ್ ಯೋಜನೆಗಳಲ್ಲಿ ಇಂದಿನಿಂದ ಈ ಬದಲಾವಣೆ ಗಮನಿಸಿ

Bank

Krishnaveni K

ನವದೆಹಲಿ , ಮಂಗಳವಾರ, 1 ಅಕ್ಟೋಬರ್ 2024 (13:36 IST)
ನವದೆಹಲಿ: ಪಿಪಿಎಪ್, ಸುಕನ್ಯ ಸಮೃದ್ಧಿ ಯೋಜನೆ ಮತ್ತು ಎನ್ಎಸ್ಎಸ್ ಯೋಜನೆಗಳಲ್ಲಿ ಇಂದಿನಿಂದ ಕೆಲವು ಬದಲಾವಣೆಯಾಗುತ್ತಿದ್ದು, ಇದರ ಬಗ್ಗೆ ಇಲ್ಲಿದೆ ಮಾಹಿತಿ.

ಅಂಚೆ ಕಚೇರಿಗಳ ಮೂಲಕ ತೆರೆಯಲಾಗುವ ಸಣ್ಣ ಉಳಿತಾಯ ಖಾತೆಗಳ ವಿವಿಧ ಯೋಜನೆಗಳಲ್ಲಿ ಕೆಲವು ಬದಲಾವಣೆಯಾಗುತ್ತಿದೆ. ನಿಯಮ ಪ್ರಕಾರ ಇಲ್ಲದ ಕೆಲವು ಖಾತೆಗಳನ್ನು ರೆಗ್ಯುಲರೈಸ್ ಮಾಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ತಂದಿದೆ. ಅದು ಇಂದಿನಿಂದ ಜಾರಿಯಾಗಲಿದೆ.

ಎನ್ಎಸ್ಎಸ್ ಖಾತೆಗಳ ಬದಲಾವಣೆ
ನ್ಯಾಷನಲ್ ಸೇವಿಂಗ್ಸ್ ಸ್ಕೀಮ್ ಅಥವಾ ಎನ್ಎಸ್ಎಸ್ ಖಾತೆಯಲ್ಲಿ ಒಬ್ಬರೇ ವ್ಯಕ್ತಿ ಎರಡು ಖಾತೆಗಳನ್ನು ತೆರೆದಿದ್ದರೆ ಮೊದಲು ತೆರೆದ ಖಾತೆಯನ್ನು ಮಾನ್ಯ ಮಾಡಲಾಗುತ್ತದೆ.  ಎರಡನೇ ಖಾತೆಗೆ ಪೋಸ್ಟ್ ಆಫೀಸ್ ಸೇವಿಂಗ್ಸ್ ಖಾತೆಯ ಬಡ್ಡಿದರದ ಪ್ರಕಾರ ಶೇ.2 ರಷ್ಟು ಹೆಚ್ಚುವರಿ ಬಡ್ಡಿ ಕೊಡಲಾಗುತ್ತದೆ. ಒಂದು ವೇಳೆ ಎನ್ಎಸ್ಎಸ್ ಖಾತೆಗೆ ನಿಗದಿ ಮಾಡಿರುವ ವಾರ್ಷಿಕ ಠೇವಣಿ ಮಿತಿ ಮೀರಿ ಹಣವಿದ್ದರೆ ಅದಕ್ಕೆ ಮಿತಿಯೊಳಗಿರುವ ಹಣಕ್ಕೆ ಮಾತ್ರ ಬಡ್ಡಿ ಸಿಗುತ್ತದೆ. ಉಳಿದ ಹಣವನ್ನು ಬಡ್ಡಿರಹಿತವಾಗಿ ಠೇವಣಿದಾರರಿಗೆ ನೀಡಲಾಗುತ್ತದೆ.

ಅಪ್ರಾಪ್ತರ ಹೆಸರಿನಲ್ಲಿರುವ ಪಿಪಿಎಫ್ ಖಾತೆಗಳ ನಿಯಮ
ಮಕ್ಕಳ ಅಥವಾ ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆದಿದ್ದರೆ ಇದಕ್ಕೆ ರೆಗ್ಯುಲರ್ ಸ್ಕೀಮ್ ಪ್ರಕಾರ ಬಡ್ಡಿ ಇರುವುದಿಲ್ಲ. ಬದಲಾಗಿ ಸೇವಿಂಗ್ಸ್ ಖಾತೆಯ ನಿಯಮದಂತೆ ಬಡ್ಡಿ ದರ ನಿಗದಿಯಾಗುತ್ತದೆ. ಮಗುವಿಗೆ 18 ವರ್ಷ ದಾಟಿದ ಬಳಿಕವಷ್ಟೇ ರಗ್ಯುಲರ್ ಬಡ್ಡಿ ದರ ಅನ್ವಯವಾಗುತ್ತದೆ.

ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳ ನಿಯಮ
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಪಿಪಿಎಫ್ ಖಾತೆ ತೆರೆಯಬಹುದಾಗಿದೆ. ಒಂದು  ವೇಳೆ ಒಂದಕ್ಕಿಂತ ಹೆಚ್ಚು ಖಾತೆ ತೆರೆದಿದ್ದರೆ ಮೊದಲು ತೆರೆದ ಖಾತೆಗೆ ಮಾತ್ರ ರೆಗ್ಯುಲರ್ ಬಡ್ಡಿದರ ಸಿಗುತ್ತದೆ. ಇತರೆ ಖಾತೆಗಳನ್ನು ಪ್ರೈಮರಿ ಖಾತೆಯೊಂದಿಗೆ ವಿಲೀನ ಮಾಡಲಾಗುತ್ತದೆ. ಅದರಲ್ಲೂ ವಾರ್ಷಿಕ ಹೂಡಿಕೆ ಮಿತಿ ಹಣ ದಾಟಿದ್ದರೆ ನಿಗದಿತ ಹೂಡಿಕೆಗೆ ಮಾತ್ರೆ ರೆಗ್ಯುಲರ್ ಬಡ್ಡಿದರ ಸಿಗಲಿದೆ. ಹೆಚ್ಚುವರಿ ಹಣವನ್ನು ಬಡ್ಡಿರಹಿತವಾಗಿ ಮರಳಿಸಲಾಗುತ್ತದೆ.

ತಂದೆ-ತಾಯಿ ಹೊರತಾಗಿ ಇತರರು ಪಿಪಿಎಫ್ ಖಾತೆ ತೆರೆದಿದ್ದರೆ
ಅಪ್ರಾಪ್ತ ಮಗುವಿನ ಹೆಸರಿನಲ್ಲಿ ತಂದೆ, ತಾಯಿ ಹೊರತಾಗಿ ಅಜ್ಜ, ಅಜ್ಜಿ ಅಥವಾ ಇನ್ಯಾರೇ ಪೋಷಕರು ಪಿಪಿಎಫ್ ಖಾತೆ ತೆರೆಯಲು ಅವಕಾಶವಿದೆ. ಅವರು ಮಗುವಿನ ಪೋಷಕರಾಗಿರುತ್ತಾರೆ. ಅಜ್ಜ-ಅಜ್ಜಿ ನ್ಯಾಚುರಲ್ ಗಾರ್ಡಿಯನ್ ಆಗಿರುವುದಿಲ್ಲ. ಅವರ ಹೆಸರಿನಲ್ಲಿ ಖಾತೆ ತೆರೆದಿದ್ದರೆ ಅದು ಲೀಗಲ್ ಪೋಷಕರಿಗೆ ವರ್ಗಾವಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಪ್ಪು ಮಾಡಿಲ್ಲಾಂದ್ರೆ ಸೈಟು ಕೊಟ್ಟಿದ್ಯಾಕೆ ಎಂದು ಪ್ರಶ್ನೆ ಮಾಡಿದ್ದ ಸಿದ್ದರಾಮಯ್ಯ ಈಗ ಮಾಡಿದ್ದೂ ಅದೇ (Video)