Select Your Language

Notifications

webdunia
webdunia
webdunia
webdunia

HMT ಸಂಸ್ಥೆಗೆ ಮರು ಜೀವ ನೀಡಲು ಸಿದ್ಧರಾದ ಕುಮಾರಸ್ವಾಮಿ: ಕಂಪನಿ ಮುಚ್ಚಿದ್ದೇಕೆ

HD Kumaraswamy

Krishnaveni K

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (11:51 IST)
Photo Credit: Facebook
ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್ ಡಿ ಕುಮಾರಸ್ವಾಮಿ ಎಚ್ ಎಂಟಿ ಸಂಸ್ಥೆಗೆ ಮರು ಜೀವ ನೀಡಲು ಮುಂದಾಗಿದ್ದಾರೆ. ಇದಕ್ಕಾಗಿ ಕೇಂದ್ರದಿಂದ ಹೂಡಿಕೆ ಮಾಡಲು ಯೋಜನೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿದ್ದ ಎಚ್ ಎಂಟಿ ಸಂಸ್ಥೆ 2016 ರಲ್ಲಿ ಸ್ಥಗಿತವಾಗಿತ್ತು. ಕಂಪನಿ ನಷ್ಟದಲ್ಲಿ ಸಾಗುತ್ತಿತ್ತು ಎನ್ನುವ ಕಾರಣಕ್ಕೆ ಇದನ್ನು ಬಂದ್ ಮಾಡಲಾಗಿತ್ತು. ಆದರೆ ಇದರಿಂದ ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಇದೀಗ ಕುಮಾರಸ್ವಾಮಿ ಎಚ್ ಎಂಟಿ ಸಂಸ್ಥೆಗೆ ಮರುಜೀವ ನೀಡಲು ಜಿದ್ದಿಗೆ ಬಿದ್ದಿದ್ದಾರೆ.

ಇದಕ್ಕೆ ಮರು ಜೀವ ನೀಡಲು ಕೇಂದ್ರ ಸರ್ಕಾರದಿಂದ ಸಹಾಯ ಪಡೆಯಲು ಮುಂದಾಗಿದ್ದಾರೆ. ಕೇಂದ್ರದ ಅನುದಾನ ಪಡೆದು ಮತ್ತೆ ಸಂಸ್ಥೆ ಪುನರಾರಂಭಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಅಂಗವಾಗಿಯೇ ಇತ್ತೀಚೆಗೆ ಎಲ್ಲರೂ ಎಚ್ ಎಂಟಿ ವಾಚ್ ಗಳನ್ನು ಉಡುಗೊರೆಯಾಗಿ ನೀಡಿ ಎಂದು ಕರೆ ನೀಡಿದ್ದರು.

ಸಚಿವ ಕುಮಾರಸ್ವಾಮಿಯವರ ಈ ಯೋಜನೆಯಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಬಹುದು. ರಾಜ್ಯದ ಹಲವರಿಗೆ ಉದ್ಯೋಗ ಸಿಗಬಹುದು. ಎಚ್ ಎಂಟಿ ವಾಚು ತಯಾರಿಕೆ ಕಂಪನಿ ಪುನರಾರಂಭಿಸಲು 6,500 ಕೋಟಿ ಹೂಡಿಕೆ ಮಾಡಲು ಕೇಂದ್ರ ಸಮ್ಮತಿ ನೀಡಿದೆ.  ರೋಬೋಟಿಕ್ ತಂತ್ರಜ್ಞಾನ ಬಳಸಿ ಹೊಸ ಬಗೆಯ ವಾಚ್ ತಯಾರಿಕೆ ನೀಲನಕ್ಷೆಯನ್ನೂ ಸಿದ್ಧಪಡಿಸಿದ್ದಾರೆ.  ಈ ಬಗ್ಗೆ ತಜ್ಞರ ಜೊತೆ ಕುಮಾರಸ್ವಾಮಿ ಮಾತುಕತೆಯನ್ನೂ ನಡೆಸಿದ್ದಾರೆ. ಸ್ಥಳೀಯರಿಗೆ ಆದ್ಯತೆ ನೀಡಿ ವಾಚು ತಯಾರಿಕೆ ಮಾಡಲು ಯೋಜನೆ ರೂಪಿಸಿದ್ದಾರೆ. ಇದರಿಂದ ಉದ್ಯೋಗಾವಕಾಶ ಹೆಚ್ಚಿಸಬಹುದು ಎಂಬುದು ಅವರ ಯೋಜನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಜ್ವಲ್ ರೇವಣ್ಣ ತೋಟದ ಮನೆಯಲ್ಲಿತ್ತು ಸೀರೆ, ಪೆಟಿಕೋಟ್: ಇದೊಂದು ಪರೀಕ್ಷೆ ದೃಢಪಟ್ಟರೆ ಪ್ರಜ್ವಲ್ ಲಾಕ್