Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ತೋಟದ ಮನೆಯಲ್ಲಿತ್ತು ಸೀರೆ, ಪೆಟಿಕೋಟ್: ಇದೊಂದು ಪರೀಕ್ಷೆ ದೃಢಪಟ್ಟರೆ ಪ್ರಜ್ವಲ್ ಲಾಕ್

Prajwal Revanna

Krishnaveni K

ಬೆಂಗಳೂರು , ಬುಧವಾರ, 11 ಸೆಪ್ಟಂಬರ್ 2024 (11:35 IST)
ಬೆಂಗಳೂರು: ಮಹಿಳೆಯರ ಮೇಲೆ ರೇಪ್ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾಕ್ಷ್ಯ ಒದಗಿಸುವಂತಹ ಸಾಕಷ್ಟು ವಸ್ತುಗಳು ಅವರ ತೋಟದ ಮನೆಯಲ್ಲಿ ಪತ್ತೆಯಾಗಿದೆ.

ಪ್ರಜ್ವಲ್ ರೇವಣ್ಣ ತಮ್ಮ ಹೊಳೆನರಸೀಪುರದ ತೋಟದ ಮನೆಯಲ್ಲಿ ಮತ್ತು ಬಸವನಗುಡಿಯ ಮನೆಯಲ್ಲೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಬಂದಿದೆ. ಇದು ಚಾರ್ಜ್ ಶೀಟ್ ನಲ್ಲೂ ಉಲ್ಲೇಖವಾಗಿದೆ. ಇದೀಗ ತನಿಖಾ ತಂಡಕ್ಕೆ ಅವರ ತೋಟದ ಮನೆಯಲ್ಲಿ ಸೀರೆಗಳು, ಪೆಟಿಕೋಟ್ ಗಳು, ವೀರ್ಯದ ಕಲೆ, ಕೂದಲು ಪತ್ತೆಯಾಗಿದೆ.

ಇದೀಗ ಇವೆಲ್ಲವನ್ನೂ ಪೊಲೀಸರು ಡಿಎನ್ ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಒಂದು ವೇಳೆ ಬೆಡ್ ಶೀಟ್ ನಲ್ಲಿ ಪತ್ತೆಯಾದ ವೀರ್ಯಾಣು ಕಲೆ ಪ್ರಜ್ವಲ್ ನದ್ದೇ ಎಂದು ಗೊತ್ತಾದರೆ ಅವರಿಗೆ ಮತ್ತಷ್ಟು ಸಂಕಷ್ಟ ಕಾದಿದೆ. ಚಾರ್ಜ್ ಶೀಟ್ ಪ್ರಕಾರ ಈಗಾಗಲೇ ಪ್ರಜ್ವಲ್ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದು ಕನ್ ಫರ್ಮ್ ಆಗಿದೆ.

ಇದೀಗ ಸಿಕ್ಕಿರುವ ಸಾಕ್ಷ್ಯಗಳಿಂದ ದಿನೇ ದಿನೇ ಅವರ ವಿರುದ್ಧ ಕಾನೂನಿನ ಕುಣಿಕೆ ಬಿಗಿಯಾಗುತ್ತಿದೆ. ಸದ್ಯಕ್ಕೆ ವೈದ್ಯಕೀಯ ಪರೀಕ್ಷೆ ಮತ್ತು ಡಿಎನ್ ಎ ಪರೀಕ್ಷೆಯ ಫಲಿತಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಡಿಎನ್ ಎ ಪರೀಕ್ಷೆ ವರದಿ ಬಂದ ನಂತರ ಮತ್ತೊಮ್ಮೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ. ಸದ್ಯಕ್ಕೆ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಪೊಲೀಸರ ತನಿಖೆ ಪ್ರಕಾರ ಪ್ರಜ್ವಲ್ ಹೊಳೆನರಸೀಪುರದ ಮನೆ, ತೋಟದ ಮನೆ, ಬಸವನಗುಡಿ ಮನೆ, ಹಾಸನದ ಅತಿಥಿ ಗೃಹದಲ್ಲಿ ಮಹಿಳೆಯರ ಮೇಲೆ ರೇಪ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರೇಸ್ ಲಿಸ್ಟ್ ಗೆ ಜಿ ಪರಮೇಶ್ವರ್ ಸೇರ್ಪಡೆ: ಸುಮ್ನಿರಪ್ಪಾ ಎಂದ ಸಚಿವರು