Select Your Language

Notifications

webdunia
webdunia
webdunia
webdunia

ಎಲ್ಲಿಗೆ ಬಂತು ಪ್ರಜ್ವಲ್ ರೇವಣ್ಣ ಕೇಸ್ ಇಲ್ಲಿದೆ ಅಪ್ ಡೇಟ್

Prajwal Revanna

Krishnaveni K

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (10:32 IST)
ಬೆಂಗಳೂರು: ಮಹಿಳೆಯರ ಮೇಲೆ ರೇಪ್, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕೇಸ್ ಲೇಟೆಸ್ಟ್ ಅಪ್ ಡೇಟ್ ಇಲ್ಲಿದೆ.

ಕೆಲವು ದಿನಗಳ ಹಿಂದಷ್ಟೇ ಪ್ರಜ್ವಲ್ ಕೇಸ್ ನಲ್ಲಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಈ ವೇಳೆ ಪ್ರಜ್ವಲ್ ಮನೆಕೆಲಸದಾಕೆ ಮೇಲೆ ಬಸವನಗುಡಿ ಮನೆಯಲ್ಲಿ ರೇಪ್ ಮಾಡಿದ್ದರು ಅಲ್ಲದೆ, ಆಕೆಯ ಮಗಳಿಗೂ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂಬ ಅಂಶ ಉಲ್ಲೇಖವಾಗಿತ್ತು.

ಸದ್ಯಕ್ಕೆ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ಬಳಿಕ ಪ್ರಜ್ವಲ್ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ತಿರಸ್ಕರಿಸಿದೆ. ಮಹಿಳೆಯ ಮೇಲೆ ರೇಪ್ ಆರೋಪದಲ್ಲಿ ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಜಾಮೀನಿಗೆ ಪ್ರಯತ್ನಿಸಿದ್ದರು.

ಪ್ರಜ್ವಲ್ ಮೇಲೆ ಕೇವಲ ಒಂದಲ್ಲ, ಹಲವು ಪ್ರಕರಣಗಳಿವೆ. ಹೀಗಾಗಿ ಅವರಿಗೆ ಎಲ್ಲಾ ಪ್ರಕರಣಗಳಿಂದ ಮುಕ್ತಿ ಸಿಕ್ಕು ಜಾಮೀನು ಪಡೆಯುವುದು ಅಷ್ಟು ಸುಲಭವಲ್ಲ. ನಿನ್ನೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ವಜಾಗೊಂಡಿದೆ. ಇನ್ನು, ಪ್ರಜ್ವಲ್ ಮುಂದಿನ ನಡೆಯೇನು ಎಂಬುದು ಇನ್ನೂ ತಿಳುದುಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ವೈದ್ಯೆ ಹತ್ಯೆಗೆ ಟ್ವಿಸ್ಟ್: ಸಂತ್ರಸ್ತೆಯ ಪೋಷಕರಿಂದ ಶಾಕಿಂಗ್ ಹೇಳಿಕೆ