Publish Date: Wed, 04 Sep 2024 (10:28 IST)
Updated Date: Wed, 04 Sep 2024 (10:30 IST)
ತುಮಕೂರು: ಅಪ್ಪ ಎಂಬ ಪಟ್ಟಕ್ಕೇ ಈ ಪಾಪಿ ಮಸಿ ಬಳಿದಿದ್ದಾನೆ. ತನ್ನ ಹದಿಹರೆಯದ ಮಗಳ ಮೇಲೆಯೇ ರೇಪ್ ಮಾಡಿ ಆಕೆ ಗರ್ಭಿಣಿಯಾಗಲು ಕಾರಣವಾಗಿದ್ದಾನೆ. ಈ ಘಟನೆ ನಡೆದಿರುವುದು ತುಮಕೂರಿನಲ್ಲಿ.
14 ವರ್ಷದ ಮಗಳ ಮೇಲೆ ತಂದೆಯೇ ನಿರಂತರ ಅತ್ಯಾಚಾರವೆಸಗಿದ ಕಾರಣಕ್ಕೆ ಆಕೆ ಗರ್ಭಿಣಿಯಾಗಿದ್ದಾಳೆ. ತುಮಕೂರಿನ ಹೊನ್ನವಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೆಲಸಕ್ಕೆಂದು ಬೇರೆ ರಾಜ್ಯದಿಂದ ಇಲ್ಲಿಗೆ ವಲಸೆ ಬಂದಿದ್ದ ವ್ಯಕ್ತಿ ಮಗಳ ಮೇಲೆಯೇ ಅತ್ಯಾಚಾರವೆಸಗಿದ್ದಾನೆ.
ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತಾಯಿ ಆಸ್ಪತ್ರೆಗೆ ಕರೆದೊಯ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದು, ವಿಷಯ ತಿಳಿಯುತ್ತಿದ್ದಂತೇ ಪೊಲೀಸರು ಪೋಕ್ಸೋ ಖಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಮಾರು ಎಂಟು ತಿಂಗಳ ಹಿಂದಷ್ಟೇ ಈ ಕುಟುಂಬ ಕೂಲಿ ಕೆಲಸಕ್ಕಾಗಿ ತುಮಕೂರಿಗೆ ಬಂದು ಹೊನ್ನವಳ್ಳಿಯಲ್ಲಿ ವಾಸ್ತವ್ಯ ಹೂಡಿತ್ತು. ಆದರೆ ತಂದೆಯೇ ತನ್ನ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ಯಾರಿಗೂ ಹೇಳಲಾಗದೇ ಬಾಲಕಿ ಒಳಗೊಳಗೇ ಕುಗ್ಗಿಹೋಗಿದ್ದಳು. ಇದೀಗ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.