Select Your Language

Notifications

webdunia
webdunia
webdunia
webdunia

ಸಿಎಂ ರೇಸ್ ಲಿಸ್ಟ್ ಗೆ ಜಿ ಪರಮೇಶ್ವರ್ ಸೇರ್ಪಡೆ: ಸುಮ್ನಿರಪ್ಪಾ ಎಂದ ಸಚಿವರು

G Parameshwar

Krishnaveni K

ತುಮಕೂರು , ಬುಧವಾರ, 11 ಸೆಪ್ಟಂಬರ್ 2024 (11:26 IST)
ತುಮಕೂರು: ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಬಳಿಕ ಮುಖ್ಯಮಂತ್ರಿಯಾಗಲು ಹಿರಿಯ ನಾಯಕರು ಸಾಲಾಗಿ ನಿಂತಿದ್ದಾರೆ. ಸಿಎಂ ಸ್ಥಾನಕ್ಕೆ ಒಬ್ಬೊಬ್ಬರೇ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ.

ಈ ಲಿಸ್ಟ್ ಗೆ ಈಗ ಜಿ ಪರಮೇಶ್ವರ್ ಹೆಸರೂ ಸೇರ್ಪಡೆಯಾಗಿದೆ. ಇಂದು ತಮ್ಮ ತವರು ಕ್ಷೇತ್ರ ತುಮಕೂರಿಗೆ ಬಂದಿದ್ದಾಗ ಗೃಹಸಚಿವ ಜಿ ಪರಮೇಶ್ವರ್ ಅಭಿಮಾನಿಗಳು ಜೈಕಾರ ಕೂಗುವಾಗ ಅವರ ಹೆಸರಿನ ಜೊತೆ ಮುಂದಿನ ಮುಖ್ಯಮಂತ್ರಿಗೆ ಜೈ ಎಂದಿದ್ದಾರೆ. ಆ ಮೂಲಕ ತಮ್ಮ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಆದರೆ ತಮ್ಮ ಅಭಿಮಾನಿಗಳ ಗುಂಪು ಮುಂದಿನ ಮುಖ್ಯಮಂತ್ರಿಗೆ ಜೈ ಎಂದಾಗ ಸಿಡಿಮಿಡಿಗೊಂಡ ಜಿ ಪರಮೇಶ್ವರ್ ಸುಮ್ನಿರಪ್ಪಾ ಎಂದು ಸುಮ್ಮನಾಗಿಸಿದರು. ಅಲ್ಲೇ ಇದ್ದ ಮಾಧ್ಯಮದವರು ಹೆಚ್ಚಿನ ಪ್ರಶ್ನೆ ಕೇಳಬಹುದು ಎಂದೇನೋ ಪರಮೇಶ್ವರ್ ಕಾರು ಹತ್ತಿ ಹೊರಟೇ ಬಿಟ್ಟರು.

ಅದೇನೇ ಇರಲಿ, ಕಾಂಗ್ರೆಸ್ ನಲ್ಲಿ ಈಗ ಸಿಎಂ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಹೈಕಮಾಂಡ್ ಮಾತಿಗೂ ಜಗ್ಗದೇ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಈಗ ಎಐಸಿಸಿ ನಾಯಕ ರಾಹುಲ್ ಗಾಂಧಿಗೆ ರಾಜ್ಯ ನಾಯಕರ ವರ್ತನೆ ಬಗ್ಗೆ ದೂರು ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾ ಪ್ರವಾಸದಲ್ಲಿ ಭಾರತ ವಿರೋಧಿ ಇಲ್ಹಾನ್ ಒಮರ್ ಜೊತೆ ರಾಹುಲ್ ಗಾಂಧಿ ಪೋಸ್