ಸಿದ್ದರಾಮಯ್ಯ ಬಳಿ ಆರತಿ ತಟ್ಟೆಗೆ ಹಾಕಲೂ ದುಡ್ಡಿಲ್ಲ, ಇಲ್ಲೂ ಡಿಕೆ ಶಿವಕುಮಾರ್ ಸಹಾಯ
ಸಕಲೇಶಪುರ , ಶುಕ್ರವಾರ, 6 ಸೆಪ್ಟಂಬರ್ 2024 (16:19 IST)
ಸಕಲೇಶಪುರ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ನಾನೇ ಬಂಡೆಯಂತೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಅದು ಇಂದೂ ನಿಜವಾಗಿದೆ. ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲು ಸಕಲೇಶಪುರಕ್ಕೆ ಬಂದಿದ್ದ ಸಿಎಂಗೆ ಡಿಕೆಶಿ ಅಕ್ಷರಶಃ ಸಾಥ್ ನೀಡಿದ್ದಾರೆ.
ಇಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮೊದಲು ಹೋಮ-ಹವನ ನೆರವೇರಿಸಲಾಯಿತು. ಬೆಳಿಗ್ಗೆ ಪೂಜಾ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಕೂಡಿಕೊಂಡರು.
ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅರ್ಚಕ ಶಶಿಶೇಖರ್ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು. ಪೂಜೆ ಬಳಿಕ ಆರತಿ ತಟ್ಟೆಗೆ ಹಾಕಲು ಸಿದ್ದರಾಮಯ್ಯ ಬಳಿ ದುಡ್ಡಿರಲಿಲ್ಲ. ಈ ವೇಳೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪರ್ಸಿನಿಂದ ಹಣ ತೆಗೆದು ಸಿಎಂ ಸಿದ್ದರಾಮಯ್ಯಗೆ ನೀಡಿದ್ದಾರೆ.
ಕೆಲವು ದಿನಗಳ ಮೊದಲು ಮುಡಾ ಹಗರಣ ಬೆಳಕಿಗೆ ಬಂದಾಗ ಸಿಎಂ ಸಿದ್ದರಾಮಯ್ಯಗೆ ಬೆಂಬಲವಾಗಿ ನಿಂತಿದ್ದು ಇದೇ ಡಿಕೆ ಶಿವಕುಮಾರ್. ಆಗ ಅವರು ನಾನು ಯಾವತ್ತೂ ಸಿದ್ದರಾಮಯ್ಯಗೆ ಬಂಡೆ ಥರಾ ಎಂದು ಹೇಳಿದ್ದರು. ಅದನ್ನು ಅವರು ಇಂದು ಅಕ್ಷರಶಃ ಪಾಲಿಸಿದ್ದಾರೆ.
ಮುಂದಿನ ಸುದ್ದಿ