Select Your Language

Notifications

webdunia
webdunia
webdunia
webdunia

ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ: ಕೇಂದ್ರ ಸರ್ಕಾರ ತರಲಿರುವ ಹೊಸ ನಿಯಮ ತಿಳಿಯಿರಿ

Bank

Krishnaveni K

ನವದೆಹಲಿ , ಸೋಮವಾರ, 9 ಸೆಪ್ಟಂಬರ್ 2024 (09:26 IST)
ನವದೆಹಲಿ: ಸಾಮಾನ್ಯವಾಗಿ ಎಲ್ಲರೂ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಯೇ ಬಳಸುತ್ತಾರೆ. ಆದರೆ ಈ ಕಾರ್ಡ್ ಬಳಸಿ ಸಣ್ಣ ಪ್ರಮಾಣದ ಟ್ರಾನ್ಸೇಕ್ಷನ್ ನಡೆಸುವವರಿಗೆ ಕೇಂದ್ರ ಸರ್ಕಾರ ಹೊಸ ನಿಯಮ ತರಲಿದೆ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ಸಣ್ಣ ಪ್ರಮಾಣದ ಹಣ ವ್ಯವಹಾರವನ್ನು ಮತ್ತೆ ಜಿಎಸ್ ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ರೂ.2000 ರವರೆಗಿನ ಡಿಜಿಟಲ್ ವ್ಯವಹಾರಗಳಿಗೆ ಇನ್ನು ಶೇ.18 ರಷ್ಟು ಜಿಎಸ್ ಟಿ ವಿಧಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ.

2016 ರಲ್ಲಿ ಕೇಂದ್ರ ಸರ್ಕಾರ ನೋಟು ನಿಷೇಧ ಜಾರಿಗೆ ತಂದಿತ್ತು. ಇದಕ್ಕೆ ಮೊದಲು ಕಾರ್ಡ್ ಮೂಲಕ ನಡೆಯುತ್ತಿದ್ದ ವ್ಯವಹಾರಗಳು ಜಿಎಸ್ ಟಿ ವ್ಯಾಪ್ತಿಯಲ್ಲಿತ್ತು. ಆದರೆ ಬಳಿಕ ಡಿಜಿಟಲ್ ಪಾವತಿ ಉತ್ತೇಜಿಸುವ ಉದ್ದೇಶದಿಂದ ಕಾರ್ಡ್ ಬಳಸಿ ಮಾಡುತ್ತಿದ್ದ ವ್ಯವಹಾರಗಳನ್ನು ಜಿಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.

ಒಂದು ವೇಳೆ ನೀವು 2,000 ರೂ. ಪಾವತಿ ಮಾಡಿದರೆ ಅದರ ಶುಲ್ಕ 200 ರೂ. ಆಗಿರುತ್ತದೆ. ಈ 200 ರೂ.ಗೆ 38 ರೂ. ಜಿಎಸ್ ಟಿ ವಿಧಿಸಬೇಕು. ಈ ಪಾವತಿ ಹೊರೆ ಸರ್ಕಾರ ಅಂಗಡಿ ಮಾಲಿಕರಿಗೆ ವಿಧಿಸುತ್ತದೆ. ಆದರೆ ಅಂಗಡಿ ಮಾಲಿಕರು  ಆ ಮೊತ್ತವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಾರೆ. ಹೀಗಾಗಿ ಡಿಜಿಟಲ್ ಪಾವತಿ ಮುಂದಿನ ದಿನಗಳಲ್ಲಿ ಕೊಂಚ ದುಬಾರಿಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದಲ್ಲಿ ಸಿಕ್ಕಾ ಭವ್ಯ ಸ್ವಾಗತಕ್ಕೆ ಮನಸೋತ ರಾಹುಲ್ ಗಾಂಧಿ