ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸ ಎನ್ನುವುದು ದುಬಾರಿಯಾಗಿದೆ. ಮಧ್ಯಮ ವರ್ಗದವರಿಗೆ ಸಾಲ-ಸೋಲ ಮಾಡಿ ಓದಿಸುವ ಪರಿಸ್ಥಿತಿ. ಆದರೆ ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯಗಳು ಲಭ್ಯವಿದೆ. ಹಾಗಿದ್ದರೆ ಅದಕ್ಕೆ ಏನೆಲ್ಲಾ ದಾಖಲೆಗಳು ಬೇಕಾಗುತ್ತವೆ ನೋಡಿ.
ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಲಭ್ಯವಿರುತ್ತದೆ. ಉನ್ನತ ವ್ಯಾಸಂಗಕ್ಕಾಗಿ ದೇಶದಲ್ಲೇ ಕಲಿಯುವುದಿದ್ದರೆ ಅಥವಾ ವಿದೇಶಕ್ಕೆ ಹೋಗಿ ಕಲಿಯುವುದಿದ್ದರೆ ವಿದ್ಯಾರ್ಥಿಗಳು ಸಾಲ ಸೌಲಭ್ಯ ಪಡೆಯಬಹುದಾಗಿದೆ. ವಿದ್ಯಾರ್ಥಿಗಳಿಗಾಗಿ ಸಾಲ ತೀರಿಸಲು ಸಾಕಷ್ಟು ಸಮಯಾವಕಾಶಗಳೂ ಇರುತ್ತವೆ.
ಆದರೆ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆಯುವಾಗ ಅದಕ್ಕೆ ಸೂಕ್ತ ದಾಖಲೆಗಳು ಅಗತ್ಯವಾಗಿ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ವಿದ್ಯಾಭ್ಯಾಸ ಸಾಲಕ್ಕೆ ಯಾವೆಲ್ಲಾ ದಾಖಲೆಗಳನ್ನು ಕೊಡಬೇಕಾಗುತ್ತದೆ ಇಲ್ಲಿದೆ ವಿವರ.
ವಿದ್ಯಾರ್ಥಿಗಳ ಅರ್ಜಿ:
ಆಧಾರ್ ಕಾರ್ಡ್ ಅಥವಾ ಯಾವುದೇ ಐಡೆಂಟಿಟಿ ಕಾರ್ಡ್
ವಿದೇಶದಲ್ಲಿ ಶಿಕ್ಷಣ ಪಡೆಯುವುದಾದರೆ ಪಾಸ್ ಪೋರ್ಟ್ ಕಾಪಿ ಕಡ್ಡಾಯವಾಗಿ ಬೇಕು
ವಿಳಾಸ ದಾಖಲಾತಿಗಳು
ಮಾರ್ಕ್ಸ್ ಕಾರ್ಡ್ ಇತ್ಯಾದಿ ಶೈಕ್ಷಣಿಕ ದಾಖಲೆಗಳು
10 ನೇ ತರಗತಿ, 12 ನೇ ತರಗತಿಯ ಸೆಮಿಸ್ಟರ್ ಗನುಗುಣವಾಗಿ ಅಂಕಪಟ್ಟಿ
ಪ್ರವೇಶ ಪರೀಕ್ಷೆ ದಾಖಲೆಗಳು
ಶಿಕ್ಷಣಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ದಾಖಲೆ
ಮುಂದೆ ಸೇರಲಿರುವ ಕಾಲೇಜಿನ ವಿವರ
ಪಾಸ್ ಪೋರ್ಟ್ ಫೋಟೋಗಳು
ಬ್ಯಾಂಕ್ ಪಾಸ್ ಪುಸ್ತಕದ ಕಾಪಿ
ವಿದ್ಯಾರ್ಥಿಯ ಪೋಷಕರ ದಾಖಲೆಗಳು
ಆದಾಯ ಪ್ರಮಾಣ ಪತ್ರ
ಗುರುತಿನ ಚೀಟಿ
ಅಡ್ರೆಸ್ ಪ್ರೂಫ್
ಸ್ಯಾಲರಿ ಸ್ಲಿಪ್
ಬ್ಯಾಂಕ್ ಪಾಸ್ ಪುಸ್ತಕದ ವಿವರ
ಆದಾಯ ತೆರಿಗೆ ಪಾವತಿಯ ದಾಖಲೆಗಳು
ಪಾಸ್ ಪೋರ್ಟ್ ಸೈಝ್ ಫೋಟೋ
ಇವಿಷ್ಟು ವಿವರಗಳು ಕಡ್ಡಾಯವಾಗಿ ಬೇಕಾಗುತ್ತದೆ. ಇದರ ಹೊರತಾಗಿ ಆಯಾ ಬ್ಯಾಂಕ್ ಗಳಿಗೆ ಅನುಸಾರವಾಗಿ ಕೆಲವೊಂದು ದಾಖಲೆಗಳು ಅಗತ್ಯವಾಗಿರುತ್ತದೆ.