ಬೆಂಗಳೂರು: ಮಧ್ಯಮ ವರ್ಗದ ಕುಟುಂಬಗಳು ತಮ್ಮ ಉಳಿತಾಯವನ್ನು ತಮ್ಮ ಭವಿಷ್ಯಕ್ಕಾಗಿ ಎಫ್ ಡಿ ಅಥವಾ ಫಿಕ್ಸೆಡ್ ಡೆಪಾಸಿಟ್ ರೂಪದಲ್ಲಿ ಇಡುವುದು ಸಾಮಾನ್ಯ. ಇಂದು ನಾವು ಟಾಪ್ 5 ಬ್ಯಾಂಕ್ ಗಳಲ್ಲಿ ಎಫ್ ಡಿ ಖಾತೆಗೆ ಎಷ್ಟು ಬಡ್ಡಿ ದರವಿದೆ ನೋಡೋಣ.
ಎಚ್ ಡಿ ಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಎಫ್ ಡಿ ಖಾತೆಗಳಿಗೆ 1 ವರ್ಷ ಅಥವಾ 15 ತಿಂಗಳಿಗೆ ಡೆಪಾಸಿಟ್ ಮಾಡುವುದಿದ್ದರೆ ಬಡ್ಡಿ ದರ ಶೇ.7.40 ರಿಂದ ಶೇ.7.90 ರಷ್ಟಿದೆ. ನಿಮಗೆ ಲಾಭ ಸಿಗಬೇಕೆಂದರೆ 15 ತಿಂಗಳಿಗೆ ಡೆಪಾಸಿಟ್ ಮಾಡುವುದೇ ಉತ್ತಮ.
ಐಸಿಐಸಿಐ ಬ್ಯಾಂಕ್
ದೇಶದ ಮತ್ತೊಂದು ಜನಪ್ರಿಯ ಐಸಿಐಸಿಐ ಬ್ಯಾಂಕ್ ನಲ್ಲಿ ಎಫ್ ಡಿ ಖಾತೆಗಳಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಬಡ್ಡಿ ದರವಿದೆ. ಈ ಬ್ಯಾಂಕ್ ನಲ್ಲಿ 1 ವರ್ಷದ ಮಟ್ಟಿಗೆ ಎಫ್ ಡಿ ಖಾತೆ ಮಾಡುವುದಿದ್ದರೆ 7.25 ಬಡ್ಡಿ ದರ ನೀಡುತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಈಗ ಎಫ್ ಡಿ ಖಾತೆಗಳಿಗೆ ಖಾಸಗಿ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿ ದರವಿದೆ. ಹೆಚ್ಚು ಬಡ್ಡಿ ದರದ ಲಾಭ ಪಡೆಯಬೇಕೆಂದರೆ ನಿಮ್ಮ ಹಣವನ್ನು 444 ದಿನಗಳಿಗೆ ಹೂಡಿಕೆ ಮಾಡಿ. ಇದರಿಂದ 7.25% ಬಡ್ಡಿದರ ಸಿಗುತ್ತದೆ. ಕೇವಲ ಒಂದು ವರ್ಷಕ್ಕೆ ಎಫ್ ಡಿ ಮಾಡಿಸಿದರೆ 6.80% ಅಷ್ಟೇ ಬಡ್ಡಿದರ ಸಿಗುವುದು.
ಕೆನರಾ ಬ್ಯಾಂಕ್
ಅತ್ಯಂತ ವಿಶ್ವಸನೀಯ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ದರ ಸೌಲಭ್ಯವಿದೆ. ಸಾಮಾನ್ಯರಿಗೆ ಕೊಂಚ ಕಡಿಮೆ ಬಡ್ಡಿ ದರ ನಿಗದಿಯಾಗಿದೆ. ಒಂದು ವರ್ಷದ ಡೆಪಾಸಿಟ್ ಗೆ ಸಾಮಾನ್ಯ ನಾಗರಿಕರಿಗೆ 6.85% ಬಡ್ಡಿದರವಿದ್ದರೆ ಹಿರಿಯ ನಾಗರಿಕರಿಗೆ 7.35% ಬಡ್ಡಿದರ ಸಿಗುತ್ತಿದೆ.
ಆಕ್ಸಿಸ್ ಬ್ಯಾಂಕ್
ಆಕ್ಸಿಸ್ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರು ಒಂದು ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ 7.90% ಬಡ್ಡಿದರ ಸಿಗುತ್ತದೆ. ಸಾಮಾನ್ಯ ನಾಗರಿಕರಿಗೆ 7.20 ಬಡ್ಡಿದರ ನಿಗದಿಯಾಗಿದೆ. ಈ ಬ್ಯಾಂಕ್ ನಲ್ಲಿ ಗರಿಷ್ಠ ಬಡ್ಡಿದರದ ಲಾಭ ಪಡೆಯಬೇಕೆಂದರೆ 1 ವರ್ಷದ ಅವಧಿಗೆ ಎಫ್ ಡಿ ಮಾಡಿಸಿಕೊಳ್ಳುವುದು ಉತ್ತಮ.