ನವದೆಹಲಿ: ಸಾಮಾನ್ಯವಾಗಿ ಭಾರತದ ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಕ್ಕಳ ಭವಿಷ್ಯಕ್ಕೆಂದೋ, ತಮ್ಮ ಭವಿಷ್ಯಕ್ಕೆಂದೋ ಕೂಡಿಟ್ಟ ಹಣವನ್ನು ಎಫ್ ಡಿ ಠೇವಣಿ ಇಡುತ್ತಾರೆ. ಆದರೆ ಇದೀಗ ಆರ್ ಬಿಐ ತರಲಿರುವ ಈ ಒಂದು ಬದಲಾವಣೆ ಬಗ್ಗೆ ಈಗ ಎಫ್ ಡಿ ಠೇವಣಿದಾರರು ಗಮನಿಸಲೇಬೇಕು.
ಕಳೆದ 1-2 ವರ್ಷಗಳಿಂದ ಫಿಕ್ಸೆಡ್ ಡೆಪಾಸಿಟ್ (ಎಫ್ ಡಿ) ಠೇವಣಿದಾರರು ಗರಿಷ್ಠ ಬಡ್ಡಿ ದರ ಪಡೆಯುತ್ತಿದ್ದಾರೆ. ಇದರಿಂದಾಗಿ ಎಫ್ ಡಿ ಠೇವಣಿಯ ಲಾಭ ಪಡೆಯುತ್ತಿದ್ದಾರೆ. ಆದರೆ ಇನ್ನು ಮುಂದೆಯೂ ಇದು ಹೀಗೇ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಕೆಲವೇ ಸಮಯದಲ್ಲಿ ನಿಮ್ಮ ಎಫ್ ಡಿ ಖಾತೆಯ ಬಡ್ಡಿದರ ಕಡಿತವಾಗಬಹುದು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯಕ್ಕೆ ರೆಪೊ ದರವನ್ನು ಯಥಾಸ್ಥಿತಿಯಲ್ಲಿಟ್ಟುಕೊಂಡಿದೆಯಾದರೂ ಮುಂದೆ ನಿಯಮಿತವಾಗಿ ಬಡ್ಡಿದರದಲ್ಲಿ ಕಡಿತ ಮಾಡುತ್ತಾ ಬರಬಹುದು. ಇದರಿಂದಾಗಿ ಎಫ್ ಡಿ ಬಡ್ಡಿದರದಲ್ಲೂ ಬದಲಾವಣೆಯಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಇದೀಗ ಗರಿಷ್ಠ ಬಡ್ಡಿ ದರದ ಪ್ರಯೋಜನವನ್ನು ಠೇವಣಿದಾರರು ಪಡೆಯುತ್ತಿದ್ದರೂ ಮುಂದೆಯೂ ಇದೇ ಸ್ಥಿತಿ ಇರಬಹುದು ಎಂದು ಹೇಳಲು ಸಾಧ್ಯವಿಲ್ಲ. ಆಗ ಎಫ್ ಡಿ ಇಷ್ಟು ಲಾಭಕರವಾಗಿ ಇರದು. ಪಾಲಿಸಿ ರೇಟ್ ಕಡಿತ ಕೆಲವೇ ಸಮಯದಲ್ಲಿ ಜಾರಿಗೆ ಬಂದರೂ ಬ್ಯಾಂಕ್ ಗಳು ಎಫ್ ಡಿ ಠೇವಣಿ ಮೇಲಿನ ಬಡ್ಡಿದರ ಕಡಿತ ಮಾಡಲು ಮತ್ತಷ್ಟು ಸಮಯ ಬೇಕಾಗಬಹುದು. ಹಾಗಿದ್ದರೂ ಭವಿಷ್ಯದ ದೃಷ್ಟಿಯಿಂದ ಈ ಒಂದು ವಿಚಾರವನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಹೂಡಿಕೆ ಮಾಡುವುದು ಉತ್ತಮ.