ನವದೆಹಲಿ: ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ 2024 ಮಂಡಿಸಲಿದ್ದು, ಅದಕ್ಕೆ ಮೊದಲು ಇಂದು ಬೆಳಿಗ್ಗೆ ಷೇರು ಮಾರುಕಟ್ಟೆಯ ಪರಿಸ್ಥಿತಿ ಹೇಗಿದೆ ಎಂಬ ವಿವರ ಇಲ್ಲಿದೆ.
ಪ್ರಿ ಮಾರ್ಕೆಟ್ ಅಂಕಿ ಅಂಶಗಳ ಪ್ರಕಾರ ಇಂದು ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬರುವ ಸಾಧ್ಯತೆಯಿದೆ. ಅದರಲ್ಲೂ ರೈಲ್ವೇ, ಕೃಷಿ ಉಪಕರಣಗಳು, ರಕ್ಷಣಾ ಕ್ಷೇತ್ರ, ಪೆಟ್ರೋಲಿಯಂ ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬರಬಹುದು. ಈ ಕ್ಷೇತ್ರಗಳಿಗೆ ಬಜೆಟ್ ನಲ್ಲಿಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ.
ಈ ಬಾರಿ ನಿರ್ಮಲಾ ಬಜೆಟ್ ವಿಕಸಿತ ಭಾರತ ಸಂಕಲ್ಪದೊಂದಿಗೆ ಮಂಡನೆಯಾಗಲಿದೆ. ಹೀಗಾಗಿ ಭಾರತದಲ್ಲಿ ಉತ್ಪನ್ನವಾಗುವ ಉತ್ಪನ್ನಗಳ ಪ್ರೋತ್ಸಾಹಕ್ಕಾಗಿ ಹೆಚ್ಚಿನ ಅನುದಾನ, ಯೋಜನೆಗಳು ಇರಬಹುದು. ಅದರಲ್ಲೂ ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದೆ.
ವಿಶೇಷವಾಗಿ ಉಪನಗರ ರೈಲು ಯೋಜನೆ, ಮೆಟ್ರೋ ರೈಲು ಮತ್ತು ಸಾಮಾನ್ಯ ರೈಲು ಮಾರ್ಗಗಳ ನಿರ್ಮಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಇದಕ್ಕೆ ಸಂಬಂಧಪಟ್ಟ ಉತ್ಪನ್ನಗಳ ಮಾರುಕಟ್ಟೆ ದರ ಏರಿಕೆಯಾಗುವ ನಿರೀಕ್ಷೆಯಿದೆ. ಇದಲ್ಲದೆ ಕೃಷಿ ಉತ್ಪನ್ನಗಳಿಗೂ ಪ್ರೋತ್ಸಾಹ ಸಿಗಬಹುದು.
ಇಂದು ಬೆಳಿಗ್ಗೆ ಪ್ರಿ ಮಾರ್ಕೆಟ್ ವರದಿ ಅನುಸಾರ ಸೆನ್ಸೆಕ್ಸ್ 223 ಪಾಯಿಂಟ್, ನಿಫ್ಟಿ 80 ಪಾಯಿಂಟ್ ಏರಿಕೆ ಹೊಂದಿದೆ. ಅದಲ್ಲದೆ, ರೈಲ್ವೇ, ಆಗ್ರೋ ಟೆಕ್, ಡಿಫೆನ್ಸ್, ಪೆಟ್ರೋಲಿಯಂ ಷೇರುಗಳು ಏರಿಕೆಯ ಲಕ್ಷಣ ತೋರಿಸುತ್ತಿದೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಮತ್ತಷ್ಟು ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬರುವ ಎಲ್ಲಾ ಲಕ್ಷಣಗಳಿವೆ.