ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆಯಾಗಿದ್ದು ನಿನ್ನೆ ಸಂಜೆಯಿಂದ ಇಂದೂ ಏರಿಕೆ ಮುಂದುವರಿದಿದೆ.
ಈ ಬಾರಿ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಭಾರೀ ಪೈಪೋಟಿ ನಿರೀಕ್ಷಿಸಲಾಗಿತ್ತು. ಆರಂಭಿಕ ಟ್ರೆಂಡ್ ನಲ್ಲಿ ಡೊನಾಲ್ಡ್ ಟ್ರಂಪ್ ಅವರೇ ಗೆಲ್ಲುವ ಎಲ್ಲಾ ಲೆಕ್ಕಾಚಾರಗಳೂ ಕಾಣುತ್ತಿವೆ. ಗೆಲುವಿಗೆ ಒಟ್ಟು 270 ಎಲೆಕ್ಟೋರಲ್ ಮತಗಳು ಬೇಕಾಗಿದ್ದು, ಟ್ರಂಪ್ ಸದ್ಯಕ್ಕೆ 248 ಎಲೆಕ್ಟೋರಲ್ ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಟ್ರಂಪ್ ಮತ್ತೆ ಅಧ್ಯಕ್ಷ ಗಾದಿಗೇರುತ್ತಾರೆ ಎಂಬ ಲಕ್ಷಣಗಳು ಕಂಡುಬರುತ್ತಿದ್ದಂತೇ ಷೇರುಮಾರುಕಟ್ಟೆಯಲ್ಲೂ ಭಾರೀ ಏರಿಕೆ ಕಂಡುಬಂದಿದೆ. ಇಂದು ಸೆನ್ಸೆಕ್ಸ್ 671 ರೇಟಿಂಗ್ ಪಾಯಿಂಟ್ ನಷ್ಟು ಏರಿಕೆಯಾಗಿದ್ದರೆ ನಿಫ್ಟಿ 198.20 ಮತ್ತು ನಿಫ್ಟಿ ಬ್ಯಾಂಕ್ 147.60 ಪಾಯಿಂಟ್ ಗಳಷ್ಟು ಏರಿಕೆಯಾಗಿದೆ.
ನಿನ್ನೆ ಸಂಜೆಯಿಂದ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡುಬರುತ್ತಿದೆ. ಸಾಫ್ಟ್ ವೇರ್ ವಲಯದ ಷೇರುಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಷೇರುದಾರರಿಗೆ ಭರ್ಜರಿ ಲಾಭ ತಂದುಕೊಡುವ ನಿರೀಕ್ಷೆಯಿದೆ.