Select Your Language

Notifications

webdunia
webdunia
webdunia
webdunia

ನಾಯಿಗಳಿಗೆ ಮಿಡಿಯುತ್ತಿದ್ದ ಟಾಟಾ ಹೃದಯ: ಪ್ರತಿಷ್ಠಿತ ಪ್ರಶಸ್ತಿಯನ್ನು ಕೈಬಿಟ್ಟಿದ್ದು ಯಾಕೆ

Renowned businessman Ratan Tata

Sampriya

ಮುಂಬೈ , ಗುರುವಾರ, 10 ಅಕ್ಟೋಬರ್ 2024 (14:07 IST)
Photo Courtesy X
ಮುಂಬೈ: ತಮ್ಮ ಸರಳ ವ್ಯಕ್ತಿತ್ವದಿಂದಲೇ ಮನೆ ಮಾತಾಗಿರುವ ದೇಶದ ಖ್ಯಾತ ವಾಣಿಜ್ಯೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.

ಸಮಾಜಮುಖಿ ಕಾರ್ಯಗಳನ್ನು ತೊಡಗಿಸಿಕೊಂಡು ದೂರದೃಷ್ಟಿಯ ಅತ್ಯಂತ ಸರಳ, ಸಮರ್ಥ ಸಹೃದಯಿ, ಅಸಾಧಾರಣ ವ್ಯಕ್ತಿಯಾಗಿರುವ ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರಿಗೆ ನಾಯಿ ಎಂದರೆ ತುಂಬಾನೇ ಪ್ರೀತಿ.

ತಮ್ಮ ಸಾಕು ನಾಯಿಗಳೊಂದಿಗೆ, ಬೀದಿ ನಾಯಿಗಳನ್ನು ಅಷ್ಟೇ ಪ್ರೀತಿ ತೋರಿಸುತ್ತಿದ್ದರು. ಬೀದಿ ನಾಯಿಗಳಿಗಾಗಿ ಆರೈಕಾ ಕೇಂದ್ರವನ್ನು ತೆರೆದಿದ್ದರು. ಇನ್ನೂ ಅವರ ಸಾಕು ನಾಯಿ ಮೇಲಿನ ಅಪಾರದ ಪ್ರೀತಿಯ ಸಲುವಾಗಿ ಬಿಟ್ರನ್ ರಾಜಮನೆತನ ನೀಡುವ ಪ್ರತಿಷ್ಠಿತ ಪ್ರಶಸ್ತಿಯನ್ನೇ ತಿರಸ್ಕರಿಸಿದರು.

ಈ ಬಗ್ಗೆ ಅಂಕಣಕಾರ ಸುಹೇಲ್ ಸೇಠ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

2018ರ ಫೆಬ್ರವರಿ 6ರಂದು ಬ್ರಿಟನ್​ನ ರಾಜಮನೆತನ ಬಕಿಂಗ್​ಹ್ಯಾಮ್ ಅರಮನೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಸಮಾರಂಭದಲ್ಲಿ ಬ್ರಿಟನ್ ರಾಜಮನೆತನದ ಪ್ರಿನ್ಸ್​​ ಚಾರ್ಲ್ಸ್​ ಅವರು ಟಾಟಾ ಅವರ ಲೋಕೋಪಕಾರಿ ಕೆಲಸವನ್ನು ಗುರುತಿಸಿ ಜೀವಮಾನದ ಸಾಧನೆ ಪ್ರಶಸ್ತಿ ನೀಡಲು ಬಯಸಿದ್ದರು.‌ ಆದರೆ, ಸಾಕುನಾಯಿಯ ಕಾರಣಕ್ಕೆ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ.

ಈ ವಿಚಾರವನ್ನು ಸುಹೇಲ್  ಅವರು ಕೆಲವು ಸಮಯಗಳ ಹಿಂದೆ ಯೂಟ್ಯೂಬ್ ವಿಡಿಯೋದಲ್ಲಿ ನೆನಪಿಸಿಕೊಂಡಿದ್ದರು. ರತನ್ ಟಾಟಾ ಅವರಿಗೆ ನಾಯಿಗಳ ಬಗ್ಗೆ ಎಲ್ಲಿಲ್ಲರ ಪ್ರೀತಿ. ಹಾಗಾಗಿ ಅವರು ಆ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ ಎಂದು ಸ್ಮರಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸಾರಿಗೆ ನೌಕರರಿಗೆ ಸಂಬಳ ಕೊಡದೆ ಕಣ್ಣೀರು ಹಾಕಿಸಿದ್ದು ಬಿಜೆಪಿ: ಕಾಂಗ್ರೆಸ್ ಪೋಸ್ಟ್‌