Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಗೆ 1 ಕೆಜಿ ಜಿಲೇಬಿ ಪಾರ್ಸಲ್ ಮಾಡಿದ ಬಿಜೆಪಿ

Rahul Gandhi

Krishnaveni K

ನವದೆಹಲಿ , ಬುಧವಾರ, 9 ಅಕ್ಟೋಬರ್ 2024 (15:13 IST)
ನವದೆಹಲಿ: ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೇ ಬಿಜೆಪಿ ಆನ್ ಲೈನ್ ಮಾರುಕಟ್ಟೆ ಸ್ವಿಗಿ ಮೂಲಕ 1 ಕೆಜಿ ಜಿಲೇಬಿ ಪಾರ್ಸಲ್ ಮಾಡಿದೆ.

ಹರ್ಯಾಣ ಚುನಾವಣೆ ಪ್ರಚಾರದ ವೇಳೆ ರಾಹುಲ್ ಗಾಂಧಿ ಸ್ಥಳೀಯರ ಜಿಲೇಬಿ ಉತ್ಪನ್ನವನ್ನು ಹೊಗಳಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜಿಲೇಬಿ ಉತ್ಪನ್ನವನ್ನು ವಿಶ್ವದಾದ್ಯಂತ ರಫ್ತು ಮಾಡುವ ಯೋಜನೆ ಮಾಡಬಹುದು ಎಂದಿದ್ದರು. ಅವರ ಇದೇ ಮಾತುಗಳನ್ನು ಈಗ ಕಾಂಗ್ರೆಸ್ ಸೋಲಿನ ಬಳಿಕ ಬಿಜೆಪಿ ಅಣಕವಾಡುತ್ತಿದೆ.

ಇದೇ ಕಾರಣಕ್ಕೆ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲುತ್ತಿದ್ದಂತೇ ಜಿಲೇಬಿ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿತ್ತು. ಅಷ್ಟೇ ಅಲ್ಲದೆ, ನಿನ್ನೆ ಬಿಜೆಪಿ ಕಾರ್ಯಕರ್ತರು ಜಿಲೇಬಿ ಹಂಚುವ ಮೂಲಕ ಗೆಲುವಿನ ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಜಿಲೇಬಿ ಫೋಟೋಗಳನ್ನುಹಂಚಿಕೊಂಡಿದ್ದರು.

ಇದು ಇಷ್ಟಕ್ಕೇ ನಿಂತಿಲ್ಲ. ಬಿಜೆಪಿ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿಗೆ ಸ್ವಿಗಿ ಮೂಲಕ 1 ಕೆಜಿ ಜಿಲೇಬಿ ಪಾರ್ಸಲ್ ಮಾಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಆದರೆ ಹೀಗೊಂದು ವಿಚಾರ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹರ್ಯಾಣದಲ್ಲಿ ಸೋಲು: ಮತ ಎಣಿಕೆಯಲ್ಲಿ ಅಕ್ರಮವಾಗಿದೆ ದೂರು ಕೊಡುತ್ತೇವೆ ಎಂದ ರಾಹುಲ್ ಗಾಂಧಿ