Select Your Language

Notifications

webdunia
webdunia
webdunia
webdunia

ಸಾರಿಗೆ ನೌಕರರಿಗೆ ಸಂಬಳ ಕೊಡದೆ ಕಣ್ಣೀರು ಹಾಕಿಸಿದ್ದು ಬಿಜೆಪಿ: ಕಾಂಗ್ರೆಸ್ ಪೋಸ್ಟ್‌

KSRTC, Ayudha Pooje, Congress Karnataka

Sampriya

ಬೆಂಗಳೂರು , ಗುರುವಾರ, 10 ಅಕ್ಟೋಬರ್ 2024 (13:18 IST)
ಬೆಂಗಳೂರು: ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಭರಪೂರ ಸುಳ್ಳುಗಳು ತಯಾರಾಗುತ್ತಿವೆ, ಆದರೆ ಆ ಸುಳ್ಳುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ ಅಷ್ಟೇ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಆಯುಧ ಪೂಜೆಗೆ ಬಸ್ಸುಗಳ ಪೂಜಾ ಖರ್ಚಿಗೂ ಕಾಂಗ್ರೆಸ್ ಸರ್ಕಾರದನ ಬಳಿ ದುಡ್ಡಿಲ್ಲ. ಪ್ರತಿ ಬಸ್ಸಿನ ಆಯುಧ ಪೂಜೆಗೆ ಕೇವಲ ₹100ನೀಡುವಷ್ಟರ ಮಟ್ಟಿಗೆ ಸಾರಿಗೆ ಇಲಾಖೆ ದಿವಾಲಿಯಾಗಿದೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.ಇದಕ್ಕೆ ಇದೀಗ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.

ಸಂಬಳ ನೀಡದೆ ನೌಕರರ ಮನೆಯ ಹಬ್ಬದ ಸಂಭ್ರಮ ಕಿತ್ತುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಮಕ್ಕಳು “ಸಿಎಂ ಅಂಕಲ್ ಸಂಬಳ ಕೊಡಿ” ಎಂದು ಅಂಗಲಾಚಿದ ವಿಡಿಯೋವನ್ನು ಪೋಸ್ಟ್ ಮಾಡಿ ಬಿಜೆಪಿಯನ್ನು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಕಾಂಗ್ರೆಸ್ ಪೋಸ್ಟ್‌ನಲ್ಲಿ ಹೀಗಿದೆ: ಬಿಜೆಪಿಯ ಸುಳ್ಳಿನ ಕಾರ್ಖಾನೆಯಲ್ಲಿ ಭರಪೂರ ಸುಳ್ಳುಗಳು ತಯಾರಾಗುತ್ತಿವೆ, ಆದರೆ ಆ ಸುಳ್ಳುಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುವುದಿಲ್ಲ ಅಷ್ಟೇ. ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳನ್ನು ಅಧೋಗತಿಗೆ ತಳ್ಳಿದ ಬಿಜೆಪಿ ಈಗ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಪೋಣಿಸುತ್ತಿದೆ.

2008ರಿಂದ 2013ರ ವರೆಗೆ ಬಿಜೆಪಿ ಅವಧಿಯಲ್ಲಿ ಪ್ರತಿ ಬಸ್ ಗೆ ಕೊಡುತ್ತಿದ್ದ ಹಣ ₹30. ಮತ್ತೆ ಬಿಜೆಪಿಯ 2019ರಿಂದ 2023ರವರೆಗೆ ಅವಧಿಯಲ್ಲಿ ಕೊಡುತ್ತಿದ್ದ ಹಣ ₹100.
ಈಗ ಮತ್ತೆ ನಮ್ಮ ಸರ್ಕಾರ 100 ರೂಪಾಯಿಯಿಂದ 250 ರೂಪಾಯಿಗೆ ಏರಿಕೆ ಮಾಡಿ ಆದೇಶ ಹೊರಡಿಸಿದೆ.

ಸುಳ್ಳಿನ ಸರಮಾಲೆ ಕಟ್ಟುವ ಬಿಜೆಪಿ  ಆಡಳಿತಾವಧಿಯಲ್ಲಿ ಹಬ್ಬದ ಸಂದರ್ಭದಲ್ಲೂ ಸಾರಿಗೆ ನೌಕರರಿಗೆ ವೇತನ ನೀಡದೆ ಕಣ್ಣೀರು ಹಾಕಿಸಿದ್ದನ್ನು ಜನತೆ ಮರೆತಿಲ್ಲ,
ಬಸ್ಸುಗಳ ಪೂಜೆಗೆ ಹೂವು, ನಿಂಬೆಹಣ್ಣಿಗೂ ಹಣ ಕೊಡದೆ ನೌಕರರು ಸ್ವಂತ ಹಣದಿಂದ ಪೂಜೆ ಮಾಡಿದ್ದನ್ನು ರಾಜ್ಯದ ಜನ ಮರೆತಿಲ್ಲ.
ಸಾರಿಗೆ ಸಂಸ್ಥೆಯ ಆಸ್ತಿಗಳನ್ನು ಅಡಮಾನ ಇಟ್ಟ ಕೀರ್ತಿ ನಿಮಗೇ ಸಲ್ಲಬೇಕು.

ಸಂಬಳ ನೀಡದೆ ನೌಕರರ ಮನೆಯ ಹಬ್ಬದ ಸಂಭ್ರಮ ಕಿತ್ತುಕೊಂಡಿದ್ದ ಬಿಜೆಪಿ ಸರ್ಕಾರಕ್ಕೆ ಮಕ್ಕಳು 'ಸಿಎಂ ಅಂಕಲ್ ಸಂಬಳ ಕೊಡಿ' ಎಂದು ಅಂಗಲಾಚಿದ ಕರುಣಾಜನಕ ಸ್ಥಿತಿಯು ಇತಿಹಾಸವಾಗಿದೆ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಸಿಎಂ ಪದವಿ ಬಗ್ಗೆ ಚರ್ಚೆ ಮಾಡಿಲ್ಲ: ಪರಮೇಶ್ವರ್