ಬೆಂಗಳೂರು: 2024 ಕಳೆದು ಈಗ 2025 ಕ್ಕೆ ಹಲವು ನಿರೀಕ್ಷೆಗಳೊಂದಿಗೆ ಕಾಲಿಟ್ಟಿದ್ದೇವೆ. ಈ ವರ್ಷ ಚಿನ್ನದ ಬೆಲೆ ಏರಿಕೆಯಾಗುತ್ತಾ ಇಲ್ಲಿದೆ ವಿವರ.
ಚಿನ್ನ ಎನ್ನುವುದು ಭಾರತೀಯ ಮಹಿಳೆಯರಿಗೆ ಅಚ್ಚುಮೆಚ್ಚಿನ ವಸ್ತು. ಇನ್ನು ಕೆಲವರಿಗೆ ಇದು ಹೂಡಿಕೆಯ ಉತ್ತಮ ಮಾರ್ಗ. ಚಿನ್ನ ಖರೀದಿ ಹೂಡಿಕೆ ದೃಷ್ಟಿಯಿಂದ ಲಾಭಕರವೇ. ಆದರೆ ಕಳೆದ ವರ್ಷ ಚಿನ್ನದ ದರ ದಾಖಲೆ ಮಟ್ಟಕ್ಕೆ ಏರಿಕೆಯಾಗಿ ಖರೀದಿ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿಯಿತ್ತು.
ನಿನ್ನೆ ವರ್ಷದ ಕೊನೆಯ ದಿನ 10 ಗ್ರಾಂ ಚಿನ್ನದ ಬೆಲೆ 78,635 ರೂ.ಗಳಷ್ಟಿತ್ತು. ಕಳೆದ ವರ್ಷ ಬೆಲೆ 85 ಸಾವಿರದವರೆಗೆ ಬಂದಿದ್ದೂ ಇದೆ. ಆದರೆ ಈ ವರ್ಷವೂ ಇದೇ ಟ್ರೆಂಡ್ ಇರುತ್ತಾ ಅಥವಾ ಚಿನ್ನದ ಬೆಲೆಯಲ್ಲಿ ಸ್ವಲ್ಪವಾದರೂ ಕಡಿಮೆಯಾಗಬಹುದೇ ಎಂಬ ನಿರೀಕ್ಷೆ ಎಲ್ಲರಲ್ಲಿದೆ.
ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನದ ಬೆಲೆಯಲ್ಲಿ ಈ ವರ್ಷವೂ ಹೆಚ್ಚು ವ್ಯತ್ಯಾಸವೇನೂ ಆಗದು. ಈ ವರ್ಷವೂ ಚಿನ್ನದ ಬೆಲೆ ಏರಿಕೆಯಾಗುವುದು ಖಚಿತ. ತಿಂಗಳ ಆರಂಭದಲ್ಲಿ ಕೊಂಚ ಇಳಿಕೆಯಾದಂತೆ ಕಂಡುಬಂದರೂ ದಿನ ಕಳೆದಂತೆ ಮತ್ತೆ ಏರುಗತಿಯಲ್ಲಿ ಸಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಇನ್ನೇನು ಎರಡು ತಿಂಗಳಲ್ಲಿ ಮದುವೆ ಸೀಸನ್ ಶುರುವಾಗಲಿದ್ದು, ಆಗ ಚಿನ್ನಕ್ಕೆ ಬೇಡಿಕೆಯೂ ಹೆಚ್ಚಲಿದೆ. ಕೇವಲ ಚಿನ್ನ ಮಾತ್ರವಲ್ಲ, ಬೆಳ್ಳಿಗೂ ಬೆಲೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.