Select Your Language

Notifications

webdunia
webdunia
webdunia
webdunia

Gold Price today: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

Gold

Krishnaveni K

ಬೆಂಗಳೂರು , ಗುರುವಾರ, 12 ಜೂನ್ 2025 (11:29 IST)
ಬೆಂಗಳೂರು: ಚಿನ್ನದ ದರ ಇಳಿಕೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ ಚಿನ್ನದ ದರ ಏರಿಕೆಯಾಗಿರುವುದು ಗ್ರಾಹಕರ ಚಿಂತೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರಂತ್ಯಕ್ಕೆ ಲಕ್ಷದ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ದರ ಕಳೆದ ಎರಡು ದಿನಗಳಿಂದ ಕೊಂಚ ಇಳಿಕೆಯಾಗಿ ಸ್ವಲ್ಪ ನೆಮ್ಮದಿ ಮೂಡಿತ್ತು. ಆದರೆ ನಿನ್ನೆ ಮತ್ತೆ ಪರಿಶುದ್ಧ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ದರ 99,655.00 ರೂ.ಗಳಷ್ಟಿತ್ತು. ಇಂದು ಕೊಂಚವೇ ಇಳಿಕೆಯಾಗಿದ್ದು 99,600.00 ರೂ.ಗಳಿಗೆ ಬಂದು ನಿಂತಿದೆ.

ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಕೊಂಚ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 88 ರೂ. ಏರಿಕೆಯಾಗಿದ್ದು 9,928 ರೂ.ಗಳಷ್ಟಿದೆ.  24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 80 ರೂ. ಏರಿಕೆಯಾಗಿದ್ದು 9,100 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ  ಪ್ರತೀ ಗ್ರಾಂ.ಗೆ 66 ರೂ. ಏರಿಕೆಯಾಗಿದ್ದು 7,446 ರೂ.ಗಳಷ್ಟಿದೆ.


ಬೆಳ್ಳಿ ದರ
ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಕೊಂಚವೇ ಏರಿಕೆಯಾಗುತ್ತಲೇ ಇತ್ತು. ಕಳೆದ ವಾರವೇ ಲಕ್ಷ ಮೀರಿದ್ದ ಬೆಳ್ಳಿ ದರ ಈಗಲೂ ಲಕ್ಷದಲ್ಲೇ ಇದೆ. ಆದರೆ ಇಂದು ಕೇವಲ 100 ರೂ. ಇಳಿಕೆಯಾಗಿದೆ. ಇಂದು ಬೆಳ್ಳಿ ಪ್ರತೀ ಕೆ.ಜಿ.ಗೆ 1,08,900 ರೂ.ಗಳಷ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Indore Raja Raghuvanshi murder: ಗಂಡನ ಕೊಲೆ ಮಾಡಿದ ಸೋನಂ ಅದೊಂದನ್ನು ಮಾತ್ರ ಬಿಟ್ಟು ಹೋಗಿದ್ದಳು