Select Your Language

Notifications

webdunia
webdunia
webdunia
webdunia

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

Air India Crash

Krishnaveni K

ಅಹಮ್ಮದಾಬಾದ್ , ಶುಕ್ರವಾರ, 13 ಜೂನ್ 2025 (21:15 IST)
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಸಾವಿಗೀಡಾದವರ ನಿಖರ ಸಂಖ್ಯೆ ಈಗ ಬಯಲಾಗಿದೆ. ವರದಿಗಳ ಪ್ರಕಾರ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 265 ಕ್ಕೆ ಏರಿಕೆಯಾಗಿದೆ.

ಗುಜರಾತ್ ನ ಅಹಮ್ಮದಾಬಾದ್ ಏರ್ ಪೋರ್ಟ್ ನಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ ನಿನ್ನೆ ಮಧ್ಯಾಹ್ನ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡಿತ್ತು. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ ಒಬ್ಬ ಮಾತ್ರ ಬದುಕುಳಿದಿದ್ದ.

ಉಳಿದ 241 ಮಂದಿ ಸಾವಿಗೀಡಾಗಿದ್ದರು. ಇವರಲ್ಲದೆ ವಿಮಾನ ಜನವಸತಿ ಪ್ರದೇಶದ ಮೇಲೆ ಬಿದ್ದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈಗಿನ ವರದಿ ಪ್ರಕಾರ ಸಾವಿಗೀಡಾದವರ ಸಂಖ್ಯೆ 265 ಕ್ಕೆ ತಲುಪಿದೆ.

ಎಲ್ಲರ ಮೃತದೇಹಗಳನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತದೇಹಗಳು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದರಿಂದ ಗುರುತಿಸಲಾಗದ ಸ್ಥಿತಿಯಲ್ಲಿದೆ. ಹೀಗಾಗಿ ಡಿಎನ್ ಎ ಪರೀಕ್ಷೆ ನಡೆಸಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್