Select Your Language

Notifications

webdunia
webdunia
webdunia
webdunia

Air India Plane crash: ವಿಮಾನ ದುರಂತದಲ್ಲಿ ಮನುಷ್ಯರೇ ಭಸ್ಮವಾದರೂ ಇದೊಂದು ವಸ್ತು ಹಾಗೆಯೇ ಇತ್ತು video

Air India Crash

Krishnaveni K

ಅಹಮ್ಮದಾಬಾದ್ , ಶುಕ್ರವಾರ, 13 ಜೂನ್ 2025 (12:13 IST)
Photo Credit: X
ಅಹಮ್ಮದಾಬಾದ್: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆದ ವಿಮಾನ ದುರಂತದಲ್ಲಿ ಮನುಷ್ಯರೇ ಸುಟ್ಟು ಕರಕಲಾದರೂ ಇದೊಂದು  ವಸ್ತು ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಅದೇನು ಈ ಸ್ಟೋರಿ ನೋಡಿ.

ನಿನ್ನೆ ಮಧ್ಯಾಹ್ನ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹಗಳ ಶೋಧ ಕಾರ್ಯ ಈಗಲೂ ಮುಂದುವರಿದಿದೆ.

ನಿನ್ನೆ ಶೋಧ ಕಾರ್ಯ ನಡೆಸುತ್ತಿದ್ದ ಸಿಬ್ಬಂದಿಗಳಿಗೆ ಅಚ್ಚರಿಯ ವಸ್ತುವೊಂದು ಪತ್ತೆಯಾಗಿದೆ. ಇಡೀ ವಿಮಾನವೇ ಉರಿದು ಭಸ್ಮವಾಗಿದ್ದರೂ ಭಗವದ್ಗೀತೆ ಪುಸ್ತಕವೊಂದು ಹಾಗೆಯೇ ಉಳಿದುಕೊಂಡಿತ್ತು. ಇದನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ.

ಭಗವದ್ಗೀತೆ ಪುಸ್ತಕ ಅಂಚು ಮಾತ್ರ ಅಲ್ಪ ಸ್ವಲ್ಪ ಸುಟ್ಟಿದೆ ಎಂದು ಬಿಟ್ಟರೆ ಉಳಿದಂತೆ ಏನೂ ಆಗಿರಲಿಲ್ಲ. ಯಾರೋ ಒಬ್ಬರು ಪ್ರಯಾಣಿಕರು ಭಗವದ್ಗೀತೆಯನ್ನು ಜೊತೆಗೆ ತೆಗೆದುಕೊಂಡು ಹೋಗಿದ್ದರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್