Select Your Language

Notifications

webdunia
webdunia
webdunia
webdunia

Arecanut price today: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

Coconut

Krishnaveni K

ಬೆಂಗಳೂರು , ಶುಕ್ರವಾರ, 13 ಜೂನ್ 2025 (11:37 IST)
Photo Credit: Instagram
ಬೆಂಗಳೂರು: ಅಡಿಕೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ಕಳೆದ ನಾಲ್ಕೈದು ದಿನಗಳಿಂದ ನಿರಾಸೆಯಾಗಿದೆ.  ಮೊನ್ನೆ ಸಾಕಷ್ಟು ಇಳಿಕೆ ಕಂಡಿದ್ದ  ಅಡಿಕೆ ಬೆಲೆ ಇಂದೂ ಯಥಾಸ್ಥಿತಿಯಲ್ಲಿದೆ. ಆದರೆ ಕೊಬ್ಬರಿ ಬೆಳೆಗಾರರಿಗೆ ಬಂಪರ್. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಈ ವಾರ ಆರಂಭದಲ್ಲೇ ಅಡಿಕೆ ಬೆಲೆ ಇಳಿಕೆಯಾಗುತ್ತಾ ಬಂದಿದೆ. ಹೀಗಾಗಿ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿತ್ತು. ಇಂದೂ ಬೆಲೆ ಏರಿಕೆಯಾಗಿಲ್ಲ. ಬದಲಿಗೆ  ಯಥಾಸ್ಥಿತಿಯಲ್ಲಿದೆ. ನಿನ್ನೆ ಹೊಸ ಅಡಿಕೆ ಬೆಲೆ  475 ರೂ.ಗಳಾಗಿತ್ತು. ಇಂದೂ ಅದೇ ಬೆಲೆ ಮುಂದುವರಿದಿದೆ.  ಹಳೆ ಅಡಿಕೆ ಬೆಲೆಯೂ ಏರಿಕೆ-ಇಳಿಕೆಯಾಗದೇ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಹೊಸ ಪಟೋರ ಮತ್ತು ಹಳೆ ಪಟೋರ ದರದಲ್ಲಿ ಕೊಂಚ ಇಳಿಕೆಯಾಗಿದೆ. ನಿನ್ನೆ ಹೊಸ ಪಟೋರ  ದರ ಮತ್ತು ಹಳೆ ಪಟೋರ ದರ 365 ರೂ.ಗಳಷ್ಟಿತ್ತು. ಇಂದು ಎರಡೂ ತಲಾ 5 ರೂ. ಇಳಿಕೆಯಾಗಿದ್ದು, 360 ರೂ.ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 255 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರವೂ ವ್ಯತ್ಯಾಸವಾಗಿಲ್ಲ. ಇಂದೂ ತಲಾ 310 ರೂ.ಆಗಿದೆ.
ಕಾಳುಮೆಣಸು ದರ
ನಿನ್ನೆ ಕಾಳುಮೆಣಸು ದರದಲ್ಲಿಏರಿಕೆಯಾಗದೇ ಇದ್ದರೂ ಇಳಿಕೆಯಾಗಿಲ್ಲ ಎನ್ನುವುದೇ ಸಮಾಧಾನಕರ ವಿಚಾರವಾಗಿತ್ತು. ಆದರೆ ಇಂದು ಮತ್ತೆ 5 ರೂ. ಕುಸಿತವಾಗಿದೆ. ಇಂದು 650 ರೂ.ಗಳಷ್ಟಿವೆ. ಇನ್ನು ಒಣಕೊಬ್ಬರಿ ಬೆಳೆಗಾರರಿಗೆ ಇಂದು ಬಂಪರ್.  ನಿನ್ನೆ ಯಥಾಸ್ಥಿತಿಯಲ್ಲಿದ್ದ ಕೊಬ್ಬರಿ ಬೆಲೆ ಇಂದು 10 ರೂ. ಏರಿಕೆಯಾಗಿದ್ದು ಬರೋಬ್ಬರಿ 235 ರೂ. ಗೆ ತಲುಪಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಅಬ್ಬಾ.. ಚಿನ್ನದ ದರ ಇಷ್ಟೊಂದಾ ಎನ್ನುವಷ್ಟಾಗಿದೆ ನೋಡಿ