Select Your Language

Notifications

webdunia
webdunia
webdunia
webdunia

Arecanut price today: ಅಡಿಕೆ ಬೆಳೆಗಾರರಿಗೆ ಶಾಕ್, ಇಂದಿನ ಬೆಲೆ ಎಷ್ಟಾಗಿದೆ ನೋಡಿ

Arecanut

Krishnaveni K

ಬೆಂಗಳೂರು , ಸೋಮವಾರ, 9 ಜೂನ್ 2025 (12:42 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ನಿಂತ ನೀರಾಗಿತ್ತು. ಇಂದು ಏರಿಕೆಯಾಗಬಹುದು, ನಾಳೆ ಏರಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಇಂದು ಶಾಕ್ ಆಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

 ಕಳೆದ ವಾರವಿಡೀ ಅಡಿಕೆ ಬೆಲೆ ಹೆಚ್ಚಾಗದೇ ಇದ್ದರೂ ಯಥಾಸ್ಥಿತಿಯಲ್ಲಿದ್ದಿದ್ದರಿಂದ ಬೆಳೆಗಾರರು ನೆಮ್ಮದಿಯಾಗಿದ್ದರು. ಆದರೆ ಇಂದು ಅಡಿಕೆ ಬೆಲೆ ವಾರದ ಆರಂಭದಲ್ಲೇ ಇಳಿಕೆಯಾಗಿ ಬೆಳೆಗಾರರಿಗೆ ಶಾಕ್ ಕೊಟ್ಟಿದೆ. ಇಂದು ಹೊಸ ಅಡಿಕೆ ಬೆಲೆ 10 ರೂ. ಕಡಿಮೆಯಾಗಿ 485 ರೂ.ಗಳಷ್ಟೇ ಇದೆ.  ಆದರೆ ಹಳೆ ಅಡಿಕೆ ಬೆಲೆ ಯೂ ಮೊನ್ನೆಯಷ್ಟೇ ಅಂದರೆ ಗರಿಷ್ಠ 520 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 520 ರೂ.ಗಳಾಗಿವೆ.

ಆದರೆ ಪಟೋರ ದರದಲ್ಲಿ ವ್ಯತ್ಯಾಸವಾಗಿದೆ. ಹೊಸ ಪಟೋರ ಮತ್ತು ಹಳೆ ಪಟೋರ ಎರಡೂ ತಲಾ 5 ಮತ್ತು 10 ರೂ.ಗಳಷ್ಟು ಇಳಿಕೆಯಾಗಿದೆ. ಇಂದು ಹೊಸ ಪಟೋರ  ದರ 365 ರೂ.ಗಳಷ್ಟಿದೆ. ಹಳೆ ಫಟೋರ ದರ 10 ರೂ. ಕಡಿಮೆಯಾಗಿ 365 ರೂ.ಗಳಷ್ಟೇ ಇದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 5 ರೂ.ಗಳಷ್ಟು ಇಳಿಕೆಯಾಗಿದ್ದು 255 ರೂ.ಗಳಾಗಿವೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ಇಂದೂ ತಲಾ 315 ರೂ.ಆಗಿದೆ.
ಕಾಳುಮೆಣಸು ದರ
ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಕಾಳುಮೆಣಸು ಬೆಳೆಗಾರರಿಗೆ ಇಂದು ಕೊಂಚ ಸಮಾಧಾನಕರ ಸುದ್ದಿ. ಕಾಳುಮೆಣಸು ದರದಲ್ಲಿ 10 ರೂ.ಗಳಷ್ಟು ಏರಿಕೆಯಾಗಿದ್ದು ಕಳೆದ ವಾರ 650 ರೂ.ಗಳಷ್ಟಿತ್ತು. ಇಂದು 660 ರೂ.ಗಳಾಗಿವೆ. ಇನ್ನು ಒಣಕೊಬ್ಬರಿ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದ್ದು ಗರಿಷ್ಠ 200 ರೂ.ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

11 years for Modi Govt: ಏನೂ ಮಾಡಿಲ್ಲ ಪ್ರಚಾರದಿಂದಲೇ ಬದುಕಿರೋದು ಎಂದ ಸಿದ್ದರಾಮಯ್ಯ