Select Your Language

Notifications

webdunia
webdunia
webdunia
webdunia

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

Air India Crash

Krishnaveni K

ಅಹಮ್ಮದಾಬಾದ್ , ಶುಕ್ರವಾರ, 13 ಜೂನ್ 2025 (14:51 IST)
ಅಹಮ್ಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ನೂರಾರು ಮಂದಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಇವರ ಗುರುತು ಪತ್ತೆ ಮಾಡುವ ಬಗೆ ಹೇಗೆ ಇಲ್ಲಿದೆ ವಿವರ.
 

242 ಪ್ರಯಾಣಿಕರನ್ನು ಹೊತ್ತು ತೆರಳಿದ್ದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರು ಮಾತ್ರವಲ್ಲದೆ, ಹಾಸ್ಟೆಲ್ ವಿದ್ಯಾರ್ಥಿಗಳೂ ಕೆಲವರು ಮೃತಪಟ್ಟಿದ್ದರು. ವಿಮಾನ ಹಾಸ್ಟೆಲ್ ಕಟ್ಟದ ಮೇಲೆ ಬಿದ್ದಿದ್ದರಿಂದ ನಾಗರಿಕರೂ ಮೃತಪಟ್ಟಿದ್ದಾರೆ.

ವಿಮಾನ ಪತನವಾದ ತಕ್ಷಣ ಇಂಧನದಿಂದಾಗಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಮೃತದೇಹಗಳನ್ನು ಗುರುತಿಸುವ ಸ್ಥಿತಿಯಲ್ಲೇ ಇಲ್ಲ. ಹೀಗಿರುವಾಗ ಅವುಗಳನ್ನು ಕುಟುಂಬದವರಿಗೆ ಹಸ್ತಾಂತರಿಸುವುದೇ ಪ್ರಯಾಸಕರ ಕೆಲಸವಾಗಿದೆ.

ಈಗಾಗಲೇ ಕೆಲವೇ ಕೆಲವು ಜನರ ಗುರುತಿಸಬಹುದಾದ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಆದರೆ ಬಹುತೇಕ ಮೃತದೇಹಗಳನ್ನು ಅವರ ಕುಟುಂಬದವರಿಗೆ ಗುರುತಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಮೃತಪಟ್ಟವರ ಲಿಸ್ಟ್ ಮಾಡಿ ಅವರನ್ನು ಆಸ್ಪತ್ರೆಗೆ ಬರಲು ಹೇಳಿ ಸಿಬ್ಬಂದಿಗಳು ಡಿಎನ್ಎ ಸ್ಯಾಂಪಲ್ ನೀಡಲು ಹೇಳುತ್ತಿದ್ದಾರೆ. ಕುಟುಂಬದವರ ಡಿಎನ್ಎ ಸ್ಯಾಂಪಲ್ ಜೊತೆ ಮ್ಯಾಚ್ ಮಾಡಿ ಮೃತದೇಹಗಳನ್ನು ಗುರುತಿಸಿಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ