Select Your Language

Notifications

webdunia
webdunia
webdunia
webdunia

ಅಹಮದಾಬಾದ್ ವಿಮಾನ ಪತನ: ಸಾವಿನ ಸಂಖ್ಯೆ 274 ಕ್ಕೆ ಏರಿಕೆ

Air India Crash

Krishnaveni K

ಅಹಮದಾಬಾದ್ , ಶನಿವಾರ, 14 ಜೂನ್ 2025 (09:39 IST)
ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 274 ಕ್ಕೆ ಏರಿಕೆಯಾಗಿದೆ.

ನಿನ್ನೆ ಸಂಜೆಯಷ್ಟೇ ಸಾವಿನ ಸಂಖ್ಯೆ 265 ಎಂದು ವರದಿಯಾಗಿತ್ತು. ಇದೀಗ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದ್ದು 274 ಕ್ಕೆ ತಲುಪಿದೆ. ಗಂಭೀರವಾಗಿ ಗಾಯಗೊಂಡ ಅನೇಕರು ಅಹಮದಾಬಾದ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿತ್ತು.

ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದರು. ಈ ಪೈಕಿ ಓರ್ವನನ್ನು ಬಿಟ್ಟರೆ ಉಳಿದೆಲ್ಲಾ ಪ್ರಯಾಣಿಕರು, ಸಿಬ್ಬಂದಿಗಳೂ ಸ್ಥಳದಲ್ಲೇ ಮೃತಪಟ್ಟಿದ್ದರು. ವಿಮಾನ ಜನವಸತಿ ಪ್ರದೇಶಕ್ಕೆ ಬಿದ್ದಿದ್ದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗಿದೆ.

ಮೃತದೇಹಗಳನ್ನು ಗುರುತಿಸಲೂ ಆಗದ ಸ್ಥಿತಿಯಿದೆ. ಹೀಗಾಗಿ ಡಿಎನ್ ಎ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸುವ ಕೆಲಸವಾಗಬೇಕಿದೆ. ಸದ್ಯಕ್ಕೆ ಈಗಲೂ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮುಂದುವರಿದಿದೆ. ವಿಮಾನದ ಎರಡು ಬ್ಲ್ಯಾಕ್ ಬಾಕ್ಸ್ ಪೈಕಿ ಒಂದು ಮಾತ್ರ ಪತ್ತೆಯಾಗಿದೆ. ಇನ್ನೊಂದಕ್ಕಾಗಿ ಶೋಧ ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನದಲ್ಲಿ ಯಾವಾಗಲೂ ಎಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ