Select Your Language

Notifications

webdunia
webdunia
webdunia
webdunia

ಬಾಲಕಿಯ ಕಿಡ್ನಾಪ್ ಮಾಡಿ 50 ಲಕ್ಷಕ್ಕೆ ಡಿಮ್ಯಾಂಡ್

ಬಾಲಕಿಯ ಕಿಡ್ನಾಪ್ ಮಾಡಿ 50 ಲಕ್ಷಕ್ಕೆ ಡಿಮ್ಯಾಂಡ್
ಬಾಗಲಕೋಟೆ , ಗುರುವಾರ, 28 ಅಕ್ಟೋಬರ್ 2021 (10:48 IST)
ಬಾಗಲಕೋಟೆ: ಟ್ಯೂಷನ್ ಗೆ ಹೋಗಿದ್ದ ಬಾಲಕಿಯನ್ನು ಅಪರಹರಿಸಿ ಅಪಹರಣಕಾರರು 50 ಲಕ್ಷ ರೂ.ಗೆ ಬೇಡಿಕೆಯಿಟ್ಟ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ರಾತ್ರಿ 8 ಗಂಟೆಗೆ ಅಪಹರಣ ನಡೆದಿದೆ. ಕೃತಿಕಾ ಎಂಬಾಕೆ ಅಪಹರಣಕ್ಕೊಳಗಾದವಳು. ಇದೀಗ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಬಾಲಕಿಯ ಮಾವ ಅನಿಲ್ ಬಾಡಂಗಡಿ ಮೇಲೆ ಅನುಮಾನ ಮೂಡಿದೆ.

ಚಾಕಲೇಟ್ ನೆಪ ಹೇಳಿ ಕಾರೊಳಕ್ಕೆ ಎಳೆದೊಯ್ದ ಅನಿಲ್ ಹಾಗೂ ನಾಲ್ವರು ಸಹಚರರು ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರೂ ಹೇಳಿದ್ದಾರೆ. ಈ ನಡುವೆ ಪೋಷಕರಿಗೆ ಕರೆ ಮಾಡಿ 50 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಭರಣ ಪ್ರಿಯರಿಗೆ ದೀಪಾವಳಿಗೂ ಮೊದಲೇ ಸಿಕ್ತು ಗುಡ್ ನ್ಯೂಸ್!