Select Your Language

Notifications

webdunia
webdunia
webdunia
webdunia

ಯೂ ಟ್ಯೂಬ್ ನೋಡುತ್ತಾ ಮಗುವನ್ನು ಹಡೆದ ಯುವತಿ!

webdunia
ಮಲ್ಲಪುರಂ , ಗುರುವಾರ, 28 ಅಕ್ಟೋಬರ್ 2021 (09:15 IST)
ಮಲ್ಲಪುರಂ: ಕೇರಳದಲ್ಲಿ ಯುವತಿಯೊಬ್ಬಳು ಯೂ ಟ್ಯೂಬ್ ವಿಡಿಯೋ ನೋಡುತ್ತಾ ಮಗುವನ್ನು ಮನೆಯಲ್ಲೇ ಹಡೆದ ಘಟನೆ ನಡೆದಿದೆ. ಅಚ್ಚರಿಯೆಂದರೆ ಈ ವಿಚಾರ ಯುವತಿಯ ಪೋಷಕರಿಗೆ ಗೊತ್ತೇ ಇರಲಿಲ್ಲ!

ಮನೆಯ ತನ್ನ ಕೋಣೆಯೊಳಗೇ ಯುವತಿ ಮಗುವಿಗೆ ಜನ್ಮ ನೀಡಿದ್ದಳು. ಮಗುವಿನ ಕರಳಬಳ್ಳಿ ಕತ್ತರಿಸುವುದು ಹೇಗೆಂದು ಯೂ ಟ್ಯೂಬ್ ನೋಡಿ ತಿಳಿದುಕೊಂಡಿದ್ದಳಂತೆ. ಹೆರಿಗೆ ಬಳಿಕ ಮೂರು ದಿನ ತನ್ನ ಕೊಠಡಿ ಬಿಟ್ಟು ಹೊರಬಂದಿರಲಿಲ್ಲ. ಆದರೆ ಅನುಮಾನಗೊಂಡು ತಾಯಿ ನೋಡಿದಾಗ ವಿಚಾರ ಹೊರಬಂದಿದೆ. ಈ ವೇಳೆ ಮಗು ಮತ್ತು ತಾಯಿಗೆ ಸೋಂಕು ಉಂಟಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಈಗ ಇಬ್ಬರೂ ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆರೆಮನೆಯಾತನಿಂದ ಗರ್ಭಿಣಿಯಾಗಿದ್ದ ಯುವತಿ ಆತನ ಸಲಹೆಯಂತೇ ಯೂ ಟ್ಯೂಬ್ ನೋಡಿ ಹಡೆದಿದ್ದಳು. ಯುವತಿಯ ತಾಯಿ ಅಂಧೆಯಾಗಿದ್ದು, ತಂದೆ ಸೆಕ್ಯುರಿಟಿ ಗಾರ್ಡ್ ಕೆಲಸದಲ್ಲಿರುವ ಕಾರಣ ರಾತ್ರಿ ಪಾಳಿಯಲ್ಲಿರುತ್ತಿದ್ದರಂತೆ. ಹೀಗಾಗಿ ಮನೆಯವರಿಗೆ ಆಕೆ ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಳಚೆ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದವನ ವಿರುದ್ಧ ಕೇಸ್!