Publish Date: Wed, 27 Oct 2021 (09:25 IST)
Updated Date: Wed, 27 Oct 2021 (09:27 IST)
ಬಾಗಲಕೋಟೆ: ಬೆತ್ತಲಾಗಿ ಬೀಗ ಹಾಕಿದ ಮನೆಗೆ ಎಂಟ್ರಿಕೊಟ್ಟು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಬಾದಾಮಿ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಯಲ್ಲಪ್ಪ ಮತ್ತು ಬಸಮ್ಮ ಬಂಧಿತ ದಂಪತಿ. ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್ ಆಗಿರುತ್ತಿತ್ತು. ಬೆತ್ತಲಾಗಿ ಮೈಮೇಲೆ ಪೈಂಟ್ ಬಳಿದುಕೊಂಡು ದಾಳಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈಗಾಗಲೇ ಹಲವಾರು ಕಡೆ ಕಳ್ಳತನ ಮಾಡಿದ್ದ ಇವರಿಂದ 10 ಲಕ್ಷ 50 ಸಾವಿರ ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ.