Publish Date: Tue, 26 Oct 2021 (12:06 IST)
Updated Date: Tue, 26 Oct 2021 (10:03 IST)
ಜೈಪುರ: ವಿವಾಹಿತ ಮಹಿಳೆಯನ್ನು ಮಾಜಿ ಪ್ರಿಯಕರ ಹಾಡಹಗಲೇ ಕೊಚ್ಚಿ ಕೊಲೆ ಮಾಡಿದ ಘಟನೆ ರಾಜಸ್ಥಾನ್ ನ ಜಾಲೋರ್ ನಲ್ಲಿ ನಡೆದಿದೆ.
ಮಹಿಳೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದ ಮಾಜಿ ಪ್ರಿಯಕರ ಹರಿತ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವಿವಾಹಿತೆಯಾಗಿದ್ದ ಮಹಿಳೆಗೆ ಇಬ್ಬರು ಮಕ್ಕಳೂ ಇದ್ದಾರೆ.
ಕಳೆದ ಕೆಲವು ದಿನಗಳಿಂದ ಮತ್ತೆ ಸಂಬಂಧ ಬೆಳೆಸಲು ಪ್ರಿಯಕರ ಗೋಗೆರೆಯುತ್ತಲೇ ಇದ್ದ. ಆದರೆ ಮಹಿಳೆ ಕಿವಿಗೊಡದೇ ಇದ್ದಿದ್ದಕ್ಕೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.