Select Your Language

Notifications

webdunia
webdunia
webdunia
webdunia

ಹಾಲ್ಲೋ ಬ್ಲಾಕ್ ಎತ್ತಿ ಹಾಕಿ ಸ್ನೇಹಿತನಿಂದಲೇ ನೆಡೆದಿದ್ದ ಕೊಲೆ

ಹಾಲ್ಲೋ ಬ್ಲಾಕ್ ಎತ್ತಿ ಹಾಕಿ ಸ್ನೇಹಿತನಿಂದಲೇ ನೆಡೆದಿದ್ದ ಕೊಲೆ
bangalore , ಸೋಮವಾರ, 25 ಅಕ್ಟೋಬರ್ 2021 (20:59 IST)
ಬೆಂಗಳೂರು: ಹಣದ ವಿಚಾರವಾಗಿ ಬ್ಯಾಟರಾಯನಪುರದಲ್ಲಿ ಶುಕ್ರವಾರ ತಡ ರಾತ್ರಿ ನಗರದಲ್ಲಿ 25 ವರ್ಷದಿಂದ ಜೊತೆಗಿದ್ದ ಸ್ನೇಹಿತ ಯುವಕನ ಬರ್ಬರ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಚಿಕ್ಕಂದಿನ ಗೆಳೆಯ ಭಾಸ್ಕರ್ ಸಹಚರರಾದ ಶ್ರೀನಿವಾಸ್, ಗಿರೀಶ್, ಪರಮೇಶ್ ಮತ್ತು ಮಂಜುನಾಥ್ ಎನ್ನುವ 5 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
 
ಪ್ರಕರಣದ ಕುರಿತು ಡಿ.ಸಿ.ಪಿ ಸಂಜೀವ್ ಪಾಟೀಲ್ ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಚಂದ್ರಶೇಖರ್ ಮೃತ (30) ವ್ಯಕ್ತಿಯಾಗಿದ್ದು, ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನೆಡೆದಿತ್ತು. ಆರೋಪಿಗಳು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದರು.  
 
ಕೊಲೆಗೈದ ಆರೋಪಿಗಳು ತಲೆ ಮರಿಸಿಕೊಂಡಿದ್ದರು. ಹಣಕಾಸಿನ ವಿಚಾರವಾಗಿ ಆಪ್ತ ಸ್ನೇಹಿತರೆ ಕೊಲೆ ಮಾಡಿರುವ ಶಂಕೆ ಪೊಲೀಸರಿಗೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಬ್ಯಾಟರಾನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.  
 
ಮೂಲತಃ ಮಂಡ್ಯ ಜಿಲ್ಲೆಯವರಾದ ಸ್ನೇಹಿತರು: 
 
ಕೊಲೆ ಆರೋಪಿಗಳಿಗಾಗಿ ಸಿಬ್ಬಂದಿಯಿಂದ ಹುಟಕಾಟ ನೆಡೆದಿತ್ತು. ಕೊಲೆಯಾದ ಚಂದ್ರಶೇಖರ್ ಆರ್.ಆರ್.ನಗರದಲ್ಲಿ ವಾಸವಿದ್ದ. ಆಟೋ ರಿಕ್ಷಾ ಚಾಲನೆ ಮಾಡಿಕೊಂಡು ಹೂ ವ್ಯಾಪರ ಮಾಡುತ್ತಿದ್ದ. ಸ್ನೇಹಿತ  ಭಾಸ್ಕರ್ ತರಕಾರಿ ವ್ಯಾಪಾರ ಮಾಡುತ್ತಿದ್ದ. ಇಬ್ಬರು ಮೂಲತಃ  ಮಂಡ್ಯ ಜಿಲ್ಲೆಯಲ್ಲಿರುವ ಅಕ್ಕ ಪಕ್ಕದ ಹಳ್ಳಿಯ ನಿವಾಸಿಗಳಿದ್ದರು ಎಂದರು. 
 
2 ಲಕ್ಷ ರೂ ಸಾಲ:  
 
ಕೆಲ ತಿಂಗಳ ಹಿಂದೆ ಚಂದ್ರಶೇಖರ್ ಆರೋಪಿ ಭಾಸ್ಕರ್ ನ ಸ್ನೇಹಿತನಿಗೆ 2 ಲಕ್ಷ ರೂ ಸಾಲ ನೀಡಿದ್ದ. ಈ ಸಾಲವನ್ನು ಭಾಸ್ಕರ್ ತನ್ನ ಜವಾಬ್ದಾರಿ ಎಂದು ತೆಗೆದುಕೊಂಡು  ತೀರಿಸಲು ಪ್ರಾರಂಭಿಸಿದ್ದ. ಎರಡು ತಿಂಗಳಿನಿಂದ ಭಾಸ್ಕರ್ ಸರಿಯಾಗಿ ಸಾಲದ ಕಂತನ್ನು ನೀಡಿರಲಿಲ್ಲ. ಈ ಸಿಟ್ಟಿಗೆ ಭಾಸ್ಕರ್ ಪತ್ನಿಗೂ ತನಿಗೂ ಸಂಬಂಧವಿದೆ ಎಂದು ಪುಕಾರೆಬ್ಬಿಸಿ ಪರಿಚಯಸ್ಥರಿಗೆ ಸ್ನೇಹಿತರಿಗೆ ಹೇಳಿಕೊಂಡು ಊರೆಲ್ಲ ಚಂದ್ರಶೇಖರ್ ಓಡಾಡುತ್ತಿದ್ದ ಎನ್ನುವ ಮಾಹಿತಿ ದೊರೆತಿದೆ ಎಂದು ತಿಳಿಸಿದರು. 
 
ಹಿಂದೆಯೂ ಹೊಡೆದಾಟ: 
 
ಈ ಹಿನ್ನಲೆ ಮತ್ತು ಹಣಕಾಸಿನ ವಿಚಾರವಾಗಿ ಭಾಸ್ಕರ್ ಕುಟುಂಬ ಹಾಗೂ ಚಂದ್ರಶೇಖರ್ ಕುಟುಂಬಗಳ  ಮದ್ಯೆ ಹೊಡೆದಾಟವಾಗಿ ಪ್ರಕರಣ  ಹನುಮಂತನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆದರೆ ಪೊಲೀಸರು ಇಬ್ಬರಿಗೂ ರಾಜಿ ಮಾಡಿಸಿದ್ದರು, ಆಗ ಎರಡು ಕುಟುಂಬಗಳು ಒಪ್ಪಿಕೊಂಡು ಪ್ರಕರಣ ದೂರು ಹಿಂಪಡಿದ್ದರು. ಆದರೆ ಭಾಸ್ಕರ್ ಮನಸ್ಸಿನಲ್ಲಿ ಪ್ರತಿಕಾರದ ಮೊಳಕೆ ಒಡೆದಿತ್ತು. ಈ ನಡುವೆ ಭಾಸ್ಕರ್ ಪತ್ನಿ ಕೂಡ ಮನೆ ಬಿಟ್ಟು ಬೇರೆಡೆ ವಾಸ ಮಾಡಲು ಪ್ರಾರಂಭಿಸಿದ್ದಳು. ಈ ಸಂಭಂದ ಪ್ರಮುಖ ಆರೋಪಿ ಮತ್ತು ಉಳಿದ ಆರೋಪಿಗಳು ಕೊಲೆಗೆ ಸ್ಕೆಚ್ ರೂಪಿಸಿದ್ದರು ಎಂದು ಹೇಳಿದರು. 
 
ಮಾತನಾಡಲು ಕರೆಸಿದ ಮೃತ ಚಂದ್ರಶೇಖರ್: 
 
ಶುಕ್ರವಾರ ಸಂಜೆ ಮೃತ ಚಂದ್ರಶೇಖರ್ ಆರೋಪಿತರಾದ ಭಾಸ್ಕರ್ ನ ಆತನ ಮೂವರ ಸ್ನೇಹಿತರಿಗೆ ಮಾತನಾಡಲು ಕರೆಸಿದ್ದ , ಸಮೀಪದ ಬಾರ್ ನಿಂದ ಮೃತ ವ್ಯಕ್ತಿ ಹಾಗು ಸ್ನೇಹಿತರು ಎಣ್ಣೆ ಕುಡಿದಿದ್ದಾರೆ .ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರ ಮತ್ತು ದಾಂಪತ್ಯದ ವಿಚಾರವಾಗಿ ಚಂದ್ರು ಹಾಗು ಭಾಸ್ಕರ್ ಸ್ನೇಹಿತರ ಮದ್ಯೆ ಗಲಾಟೆ ನೆಡೆದಿದೆ. ಹೊರ ಬಂದ ನಂತರವೂ ಮಾತಿಗೆ ಮಾತು ಬೆಳೆದಿದೆ. ಸ್ವಲ್ಪ ಸಮಯದ ಬಳಿಕೆ  ಬಾರ್ ನಿಂದ 100 ಮೀ ನಷ್ಟು ದೂರ ತೆರಳಿ ನಿರ್ಜನ ಪ್ರದೇಶದಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ. ಆಗ ಪ್ರಮುಖ ಆರೋಪಿ ಮತ್ತು ಸ್ನೇಹಿತ ಆಟೋದಲ್ಲಿ ಬಂದು ಜೊತೆಗೂಡುತ್ತಾರೆ. ಆಗ ಜಗಳ ವಿಕೋಪಕ್ಕೆ ತಿರುಗಿ  ಆರೋಪಿಗಳು ಚಂದ್ರಶೇಖರ್  ಮುಖಕ್ಕೆ ಹೊಡೆಯಲು ಪ್ರಾರಂಭಿಸುತ್ತಾರೆ. ನಂತರ ಆತ  ಓಡಲು ಯತ್ನಿಸಿದಾಗ ಆಟೋದಲ್ಲಿದ್ದ ಕಾರದ ಪುಡಿ ತೆಗೆದು ಎರಚಿ ದೇಹದ ಹಲವು ಭಾಗಗಳಿಗೆ ಅಲ್ಲೇ ಇದ್ದ  ಚಾಕು, ಡ್ರಾಗರ್ ನಿಂದ ಇರಿಯಲು ಪ್ರಾರಂಭಿಸುತ್ತಾರೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಹಾಲ್ಲೋ ಬ್ಯಾಕ್ ಎತ್ತಿ ಹಾಕಿ ಭಾಸ್ಕರ್ ಮತ್ತು  ಸ್ನೇಹಿತರು ಕೊಲೆ ಮಾಡಿದ್ದಾರೆ. ತೀವ್ರ ರಕ್ತ ಸ್ರಾವದಿಂದ ಚಂದ್ರಶೇಖರ್ ಸ್ಥಳದಲ್ಲಿಯೇ ಸಾವನ್ನೊಪುತ್ತಾನೆ ಎಂದು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. 
 
ಸ್ನೇಹಿತನ ಮಾಸ್ಟರ್ ಪ್ಲಾನ್: 
 
ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಪೊಲೀಸರು ಬಿಟ್ಟು ಹೋಗಿದ್ದ ಆಟೋ, ಮಾರಾಕಾಸ್ತ್ರಗಳು, ಮಧ್ಯದ ಬಾಟಲ್ ಗಳು  , ಸ್ನಾಕ್ಸ್ ಗಳು ಪತ್ತೆಯಾಗಿತ್ತು. ಈ ಎಲ್ಲಾ ಘಟನೆ ನೆಡೆಯುವ ವೇಳೆ ಭಾಸ್ಕರ್ ಮೊದಲು ಸ್ಥಳದಲ್ಲಿ ಇರಲಿಲ್ಲ ಆದರೆ ಎಲ್ಲಾ ತಯಾರಿ ಮಾಡಿಕೊಂಡು ನಂತರ ಬಂದು ಜೊತೆಗೂಡಿದ್ದ, ಆತನೇ ಮುಂದೆ ನಿಂತು ಎಲ್ಲಾ ಪ್ಲಾನ್ ಮಾಡಿದ್ದ ಎಂದು ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಹಣ ಮತ್ತು ಕೌಟುಂಬಿಕ ವಿಚಾರವಾಗಿ ಹುಟ್ಟಿದ ದ್ವೇಷ ಈ ಕೊಲೆಗೆ ಕಾರಣವಾಗಿದೆ ಎಂದು ಹೇಳಿದರು.  
 
ಮುಂದುವರೆದ ತನಿಖೆ: 
 
ಮರಣೋತ್ತರ ಪರೀಕ್ಷೆಯನ್ನು ವಿಕ್ಟೊರಿಯ ಆಸ್ಪತ್ರೆಯಲ್ಲಿ ನೆಡೆಸಲಾಗಿತ್ತು  ಕೊಲೆ ನೆಡೆದಿರುವುದು ವರದಿಯಲ್ಲಿ ಸಹ ದೃಢಪಟ್ಟಿದೆ. ಸದ್ಯ 5 ಜನ ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದ್ದು ಹೆಚ್ಚಿನ ತನಿಖೆಯನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ನೆಡೆಸುತ್ತಿದ್ದಾರೆ ಎಂದು ಸಂಜೀವ್ ಪಾಟೀಲ್ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಪುನರಾರಂಭ ದಿನ ಆಸುಪಾಸಿನ ಸಿಗರೇಟ್ ಅಂಗಡಿಗಳ ಮೇಲೆ ದಾಳಿ