Select Your Language

Notifications

webdunia
webdunia
webdunia
webdunia

ಚಾಲಕರು ನಿರ್ವಾಹಕರಿಗೆ ಎಚ್ಚರಿಕೆ ನೀಡಿದ ನ್ಯಾಯಾಲಯ

ಚಾಲಕರು ನಿರ್ವಾಹಕರಿಗೆ ಎಚ್ಚರಿಕೆ ನೀಡಿದ ನ್ಯಾಯಾಲಯ
ಬೆಂಗಳೂರು , ಸೋಮವಾರ, 25 ಅಕ್ಟೋಬರ್ 2021 (19:52 IST)
ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆ ಕೊಡುವ ಚಾಲಕರು, ನಿರ್ವಾಹಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯ ನೀಡಿರುವ ಪ್ರಕರಣವೊಂದರ ತೀರ್ಪು ಎಚ್ಚರಿಕೆ ನೀಡಿದೆ.ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ಚಾಲಕ, ನಿರ್ವಾಹಕ ಸೇವಾ ನ್ಯೂನ್ಯತೆ ಎಸಗಿದ್ದಕ್ಕೆ ದೂರುದಾರ ಮಹಿಳಾ ಗ್ರಾಹಕಿ ವಿಜಯ ಬಾಯಿ ಎಲï. ಅವರಿಗೆ 8,010 ರೂ. ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜುಗೆ ರಾಜ್ಯ ಗ್ರಾಹಕ ನ್ಯಾಯಾಲಯ ನಿರ್ದೇಶಿಸಿದೆ ಇದೀಗ ರಾಜ್ಯ ಗ್ರಾಹಕ ನ್ಯಾಯಾಲಯ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದು, ಪರಿಹಾರ ಮೊತ್ತದಲ್ಲಿ 7,000 ರೂ ಕಡಿತ ಮಾಡಿ 8,010 ರೂ. ನೀಡುವಂತೆ ಆದೇಶಿಸಿದೆ. ಈ ಪ್ರಕರಣ ಸಾರಿಗೆ ಇಲಾಖೆ ಅಧಿಕಾರಿಗಳು, ನೌಕರರಿಗೆ ಪಾಠವೂ ಆಗಿದೆ. ವಿಜಯ ಬಾಯಿ ಪರ ಹೈಕೋರ್ಟ್ ವಕೀಲ ರಮೇಶ್ ನಾಯಕ್ ಎಲ್ ವಾದ ಮಾಡಿದ್ದರು.
 
ಎಲ್ಲಾದರಲ್ಲಿ ಬಸ್ ನಿಲುಗಡೆ ಮಾಡುವ ಹಾಗೂ ಸೂಕ್ತ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದೆ ಇರುವ ಚಾಲಕರಿಗೆ ಇದು ಪಾಠ ಎಂದೇ ಪರಿಗಣಿಸಲಾಗಿದೆ. ತುಮಕೂರಿನ ಈ ಉದಾಹರಣೆ ಇಡೀ ರಾಜ್ಯದ ಸರ್ಕಾರಿ ಬಸ್ ವ್ಯವಸ್ಥೆಯ ಪರಾಮರ್ಶೆಗೆ ಹಾಗೂ ಸುಧಾರಣೆಗೆ ದಾರಿಯಾಗಲಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಮಾಜಿ ಸಿಎಂ ಸಿದ್ದರಾಮಯ್ಯ