Publish Date: Tue, 26 Oct 2021 (09:20 IST)
Updated Date: Tue, 26 Oct 2021 (09:39 IST)
ಥಾಣೆ: ಮೀನಿನ ವಿಚಾರಕ್ಕಾಗಿ ಸಂಬಂಧಿಕರಿಬ್ಬರ ನಡುವೆ ನಡೆದ ಜಗಳ ಕೊನೆಯಲ್ಲಿ ಕೊಲೆಯಲ್ಲಿ ಅಂತ್ಯವಾದ ಘಟನೆ ಥಾಣೆಯಲ್ಲಿ ನಡೆದಿದೆ.
19 ವರ್ಷದ ಯುವಕ ಹಿತೇಶ್ ಮೀನಿನ ವಿಚಾರಕ್ಕಾಗಿ 55 ವರ್ಷದ ಸಂಬಂಧಿ ಜೊತೆ ಜಗಳವಾಡಿದ್ದ. ಇದೇ ವೈಷಮ್ಯದಲ್ಲಿ ಸಂಬಂಧಿಯನ್ನು ನಿರ್ಜನ ಪ್ರದೇಶಕ್ಕೆ ಕರೆದ ಹಿತೇಶ್ ಚಾಕುವಿನಿಂದ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ.
ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.