ಬೆಂಗಳೂರು: ಪ್ರೀತಿಸಿದವಳು ಕೈ ಕೊಟ್ಟಳೆಂದು ಹತಾಶೆಗೊಳಗಾದ ಜಿಮ್ ಟ್ರೈನರ್ ಒಬ್ಬರು ಸೆಲ್ಫೀ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ಸಾವಿಗೆ ಮುನ್ನ ವಿಡಿಯೋ ಮಾಡಿದ್ದ ಜಿಮ್ ಟ್ರೈನರ್ ಕಾರ್ತಿಕ್ (29) ತನಗೆ ಮೋಸ ಮಾಡಿದ ಯುವತಿ ಮತ್ತು ಆಕೆಯ ಸ್ನೇಹಿತ ಹಾಗೂ ಸ್ನೇಹಿತೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದ. ಮೊದಲು ಪ್ರೀತಿಸಿದ್ದ ಯುವತಿ ಕೆಲವು ದಿನಗಳಿಂದ ನನಗೆ ನೀನು ಇಷ್ಟವಿಲ್ಲವೆಂದು ಮಾತೇ ಬಿಟ್ಟಿದ್ದಳು. ಇದು ಕಾರ್ತಿಕ್ ಗೆ ಆಘಾತ ತಂದಿತ್ತು.
ವಿಶೇಷವೆಂದರೆ ಸಾವಿನಲ್ಲೂ ಈ ಭಗ್ನ ಪ್ರೇಮಿ ಸಾರ್ಥಕತೆ ಮೆರೆದಿದ್ದಾನೆ. ಸಾವಿಗೆ ಮೊದಲು ಎರಡೂ ಕಣ್ಣುಗಳನ್ನು ಲಯನ್ಸ್ ಇಂಟರ್ ನ್ಯಾಷನಲ್ ಐ ಬ್ಯಾಂಕ್ ಗೆ ದಾನ ಮಾಡಿದ್ದಾನೆ. ಇದೀಗ ಪೊಲೀಸರು ಯುವತಿ ಹಾಗೂ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.